ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯ ಗೇಟ್ ಬಂದ್, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತ

ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕಗಕಳ ಆಸ್ಪತ್ರೆಯ ಗೇಟ್ ಬಾಗಿಲು ಬಂದ್ ಮಾಡಿದ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಜರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದ ಗೇಟ್ ಬಂದ್ ಮಾಡಿದ್ದರಿಂದ ಆಸ್ಪತ್ರೆಗೆ ಪ್ರತಿನಿತ್ಯ ಓಡಾಡುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಿಗೆ ತೊಂದರೆಯಾಗುತ್ತಿದೆ. ವೃದ್ಧರು ಮಕ್ಕಳು ಓಡಾಡದ ಪರೀಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ಒಳಗೆ ಬರಬೇಕಂದ್ರೆ 200 ಮೀ ದೂರದ ಮತ್ತೊಂದು ಗೇಟ್ ಮೂಲಕ ಬರಬೇಕು. ಇದನ್ನು ಪ್ರಶ್ನಿಸಿದ್ರೆ ಜಿಲ್ಲಾ ಸರ್ಜನ್ ನಾಯಿ, ಹಂದಿಗಳು ಬರ್ತವೆ ಅಂತಾ ಗೇಟ್ ಬಂದ್ ಮಾಡಿದ್ದಾಗಿ ಹೇಳ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಗೇಟ್ ಬಾಗಿಲು ಓಪನ್ ಮಾಡಿಸಿ. ಇಲ್ಲಿ ಓರ್ವ ವಾಚ್ ಮೆನ್ ನೇಮಕ ಮಾಡಿ ಅಂತಾ ಸಾರ್ವಜನಿಕರು ಜಿಲ್ಲಾ ವೈದ್ಯಾಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ‌..

Edited By : PublicNext Desk
Kshetra Samachara

Kshetra Samachara

15/01/2025 04:29 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ