ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ, ಅವರು ಬೇಗ ಗುಣಮುಖರಾಗುತ್ತಾರೆ - ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ರಾಯಚೂರು: ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶಿಲ್ಪಾ ಶೆಟ್ಟಿ, ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನನಗೆ ಇದೆ .ಮುಂಬೈ ಪೊಲೀಸರು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದವನನ್ನು ಕೂಡಲೇ ಬಂಧಿಸಲಿದ್ದಾರೆ .

ಹಾಗೆಯೇ ರಾಯಚೂರಿಗೆ ಬಂದಿರುವುದು ನಾನು ನಮ್ಮ ಊರಿಗೆ ಬಂದಂತೆ ಆಗಿದೆ. ನನ್ನ ಕನ್ನಡದ ಮುಂದಿನ ಸಿನಿಮಾ ಡೆವಿಲ್ ಹಾಗೂ ಕೆಡಿ ಬರುತ್ತಿವೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಗ್ಗೆ ನನಗೆ ಭಾರೀ ಕುತೂಹಲ ಇದೆ. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಜೊತೆಗೆ ನಟಿಸಿದ್ದೇನೆ ಎಂದು ಮಂಗಳೂರು ಬೆಡಗಿ ಹೇಳಿದ್ರು.

Edited By : Suman K
PublicNext

PublicNext

18/01/2025 03:52 pm

Cinque Terre

40.89 K

Cinque Terre

4