ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ರಾಜ್ಯಮಟ್ಟದ ಶಾಸ್ತ್ರಿಯ ಸ್ಪರ್ಧೆಯಲ್ಲಿ ಮಹಾಪಾಠಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಸಾಗರ : ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಜ್ಯಮಟ್ಟದ ಶಾಸ್ತ್ರಿಯ ಸ್ಪರ್ಧೆಗಳಲ್ಲಿ ಉಮ್ಮಚ್ಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಉಪನಿಷತ್ತು ಕಂಠಪಾಠ ಸ್ಪರ್ಧೆಯಲ್ಲಿ ಚಿರಂತನ ಭಡ್ತಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾವ್ಯ ಕಂಠಪಾಠ ಸ್ಪರ್ಧೆಯಲ್ಲಿ ಮನೋಜ್ ಭಟ್ಟ, ಜ್ಯೋತಿಷ್ಯ ಶಲಾಕ ಸ್ಪರ್ಧೆಯಲ್ಲಿ ಸುಮಂತ್ ಜೋಷಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಚಿರಂತನ ಭಡ್ತಿ ಸಾಗರದ ಕನ್ನಡಪ್ರಭ ವರದಿಗಾರ ರಾಜೇಶ್ ಭಡ್ತಿ ಮತ್ತು ಶಾರದಾ ಭಡ್ತಿ ದಂಪತಿಗಳ ಪುತ್ರರಾಗಿದ್ದಾರೆ. ಚಿರಂತನ ಭಡ್ತಿಗೆ ಯಕ್ಷಗಾನದ ಬಗ್ಗೆಯೂ ವಿಶೇಷ ಆಸಕ್ತಿ ಇದೆ.

Edited By : PublicNext Desk
Kshetra Samachara

Kshetra Samachara

10/01/2025 03:07 pm

Cinque Terre

200

Cinque Terre

0

ಸಂಬಂಧಿತ ಸುದ್ದಿ