ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಜೀವದ ಹಂಗು ತೊರೆದು ಕುದುರೆ ರಕ್ಷಣೆ

ಶಿವಮೊಗ್ಗ: ಶಿವಮೊಗ್ಗದ ಆಲ್ಕೊಳ ಸಮೀಪದ ಗೋಲ್ಡನ್‌ ಸಿಟಿ ಲೇಔಟ್‌ ಬಳಿ ಆಕಸ್ಮಿಕವಾಗಿ ಚಾನಲ್‌ಗೆ ಬಿದ್ದಿದ್ದ ಕುದುರೆಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.

ಮೇಯಲು ಹೋಗಿದ್ದ ಕುದುರೆ ಮೂರು ದಿನದ ಹಿಂದೆ ಆಯಾತಪ್ಪಿ ಚಾನಲ್‌ಗೆ ಬಿದ್ದಿತ್ತು. ಹಾಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ಕತ್ತಲಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಹರಸಾಹಸ ಪಡಬೇಕಾಯಿತು. ಅಲ್ಲದೆ ಅತ್ಯಂತ ಆಳವಿದ್ದರಿಂದ ಸಿಬ್ಬಂದಿ ರೋಪ್ ಬಳಸಿ ಚಾನಲ್‌ಗೆ ಇಳಿದು ಕಾರ್ಯಾಚರಣೆ ನಡೆಸಿದರು. ರೋಪ್, ಲ್ಯಾಡರ್ ಬಳಿಸಿ ಕುದುರೆಯನ್ನು ಮೇಲೆತ್ತಲಾಗಿದೆ. ಸದ್ಯ ಕುದುರೆ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

Edited By : Suman K
PublicNext

PublicNext

10/01/2025 12:11 pm

Cinque Terre

9.2 K

Cinque Terre

0

ಸಂಬಂಧಿತ ಸುದ್ದಿ