ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಭಾರತೀಯರು ಅತ್ಯಂತ ಬುದ್ದಿವಂತರಾಗಿದ್ದು ಶಿಕ್ಷಣದ ಮೂಲಕ ಸರ್ವವ್ಯಾಪಿಯಾಗಿದ್ದಾರೆ - ಶಾಸಕ ಬೇಳೂರು

ಸಾಗರ : ಭಾರತ ಅತ್ಯಂತ ಸದೃಢವಾಗಿ ವಿಶ್ವವ್ಯಾಪಿ ಗುರುತಿಸಿಕೊಳ್ಳಲು ನಮ್ಮ ಶೈಕ್ಷಣಿಕ ವ್ಯವಸ್ಥೆ ಕಾರಣ. ಭಾರತೀಯರು ಅತ್ಯಂತ ಬುದ್ದಿವಂತರಾಗಿದ್ದು ಶಿಕ್ಷಣದ ಮೂಲಕ ಸರ್ವವ್ಯಾಪಿಯಾಗಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿಂದೆ ನಾವು ವಿದ್ಯಾಭ್ಯಾಸ ಮಾಡುವಾಗ ಕಾಲೇಜು ಶಿಕ್ಷಣ ದುಬಾರಿಯಾಗಿತ್ತು. ಆರ್ಥಿಕವಾಗಿ ಸದೃಢವಾಗಿದ್ದವರು ಮಾತ್ರ ಪದವಿ ನಂತರ ಓದಲು ಅವಕಾಶವಾಗುತಿತ್ತು. ಈ ಹಿನ್ನೆಲೆಯಲ್ಲಿ ನನಗೆ ಓದುವ ಆಸೆ ಇದ್ದರೂ ಸರ್ಕಾರಿ ಕಾಲೇಜು ಇಲ್ಲದೆ ಇರುವುದರಿಂದ ಪದವಿ ಓದಲು ಸಾಧ್ಯವಾಗಲಿಲ್ಲ. ನಾನು 2004ರಲ್ಲಿ ಶಾಸಕನಾಗಿ ಆಯ್ಕೆಯಾದ ತಕ್ಷಣ ಸರ್ಕಾರಿ ಕಾಲೇಜಿನ ಶ್ರೇಯೋಭಿವೃದ್ದಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದ್ದೇನೆ. ಜ್ಯೂನಿಯರ್ ಕಾಲೇಜು ಎಂದರೆ ದನದ ದೊಡ್ಡಿ ಎನ್ನುತ್ತಿದ್ದರು. ಅದನ್ನು ಹೋಗಲಾಡಿಸಿ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಒತ್ತು ನೀಡುವ ವ್ಯವಸ್ಥೆ ಕಲ್ಪಿಸಿದ್ದೇನೆ. ಸಾಗರದ ಇಂದಿರಾಗಾಂಧಿ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿಗೆ ಎಲ್ಲ ರೀತಿಯ ಯೋಜನೆ ರೂಪಿಸಲಾಗಿದೆ ಎಂದರು.

ಪ್ರಸ್ತುತ ದಿನಮಾನಗಳಲ್ಲಿ ಪದವಿ ನಂತರ ಬೇರೆಬೇರೆ ಉದ್ಯೋಗಾವಕಾಶಗಳು ಲಭಿಸುತ್ತಿದೆ. ವಿದೇಶದಲ್ಲಿ ಸಹ ಉದ್ಯೋಗ ಅವಕಾಶ ಸಿಗುತ್ತಿದೆ. ಕರ್ನಾಟಕ ಸರ್ಕಾರ ಬೆಂಗಳೂರಿಗೆ ಸೀಮಿತವಾಗಿದ್ದ ಐಟಿಬಿಟಿ ಕಂಪನಿಯನ್ನು ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಂಡಿದೆ. ವಿದ್ಯಾರ್ಥಿನಿಯರು ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಪದವಿ ಶಿಕ್ಷಣ ಸಂದರ್ಭದಲ್ಲಿ ಹೆಚ್ಚು ಸವಾಲುಗಳು ಇರುತ್ತದೆ. ಆದರೆ ಪದವಿಯಲ್ಲಿ ಉತ್ತಮ ಫಲಿತಾಂಶ ಪಡೆದರೆ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಅವಕಾಶವಾಗುತ್ತದೆ. ವಿದ್ಯಾರ್ಥಿನಿಯರು ಗುರುಹಿರಿಯರ ಬಗ್ಗೆ ಗೌರವ ಕೊಡಬೇಕು. ತರಗತಿಯಲ್ಲಿ ಪಾಠ ಮಾಡುವ ನಿಮ್ಮ ಅಧ್ಯಾಪಕರ ಬಗ್ಗೆ ಗೌರವ ಇರಿಸಿಕೊಳ್ಳಿ. ಜಗತ್ತಿನಲ್ಲಿ ಕದಿಯಲಾಗದ ಯಾವುದಾದರೂ ಸಂಪತ್ತು ಇದ್ದರೆ ಅದು ವಿದ್ಯೆ ಮಾತ್ರ. ಉತ್ತಮ ವಿದ್ಯೆ ನಿಮ್ಮಲ್ಲಿದ್ದರೆ ಅದು ಭವಿಷ್ಯದಲ್ಲಿ ನಿಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯೆ ಡಾ. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ರವಿಕುಮಾರ್, ಪ್ರಮುಖರಾದ ಉಷಾ ಎನ್., ರಂಜನ್ ಶೆಟ್ಟಿ, ಡಾ. ಮೂಕಪ್ಪ ನಾಯ್ಕ್, ಎಲ್.ಚಂದ್ರಪ್ಪ, ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

10/01/2025 03:03 pm

Cinque Terre

260

Cinque Terre

0

ಸಂಬಂಧಿತ ಸುದ್ದಿ