ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸಮುದ್ರದಲ್ಲಿ ಈಜಾಡಲು ತೆರಳಿ ಮೃತಪಟ್ಟ ಗೆಳೆಯರ ಮೃತದೇಹಗಳು ಹುಟ್ಟೂರಿಗೆ ರವಾನೆ

ಸುರತ್ಕಲ್: ಕುಳಾಯಿ ಜೆಟ್ಟಿ ಬಳಿ ಹೊಸಬೆಟ್ಟು ಬೀಚ್‌ನಲ್ಲಿ ಬುಧವಾರ ಈಜಾಡಲು ಹೋಗಿ ಸಮುದ್ರಪಾಲಾಗಿ ಮೃತಪಟ್ಟ ಮೂವರು ಪ್ರವಾಸಿಗರ ಮೃತದೇಹಗಳನ್ನು ಗುರುವಾರ ಅವರವರ ಹುಟ್ಟೂರುಗಳಿಗೆ ಕೊಂಡೊಯ್ಯಲಾಯಿತು.

ಈಜಾಡಲು ಸಮುದ್ರಕ್ಕೆ ತೆರಳಿದ್ದ ಚಿತ್ರದುರ್ಗದ ಮಂಜುನಾಥ ಎಸ್. (31), ವಿಜಯಪುರದ ಕೋಲಾರ ರಸ್ತೆಯ ಶಿವಕುಮಾರ್ ಮಠಪತಿ (28) ಹಾಗೂ ತಮಿಳುನಾಡಿನ ಕೃಷ್ಣಗಿರಿ ಮೂಲದ ಸತ್ಯವೇಲು ವೆಂಕಟೇಶನ್ (30) ಮೃತಪಟ್ಟಿದ್ದರು. ಮೃತದೇಹಗಳ ಮರಣೋತ್ತರ ಪರೀಕ್ಷೆ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಮನೆಯವರಿಗೆ ಬಿಟ್ಟುಕೊಡಲಾಗಿತ್ತು. ಈ ದುರಂತದಲ್ಲಿ ಸ್ಥಳೀಯರಿಂದ ರಕ್ಷಿಸಲ್ಪಟ್ಟ ಬೀದರ್‌ನ ಶಿವಕುಮಾರ್ ಮಂಜುನಾಥ್ ಸತ್ಯವೇಲು ಪರಮೇಶ್ವರ್ ಚೇತರಿಸಿಕೊಂಡಿದ್ದಾರೆ.

ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಖಾಸಗಿ ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿದ್ದ ಇವರು ಮಂಗಳೂರಿಗೆ ಪ್ರವಾಸ ಬಂದಿರುವ ವಿಷಯ ಮನೆಯವರಿಗೆ ದುರಂತದ ಮಾಹಿತಿ ತಲುಪುವವರೆಗೆ ಗೊತ್ತೇ ಇರಲಿಲ್ಲ ಎಂದು ತಿಳಿದು ಬಂದಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

10/01/2025 07:31 am

Cinque Terre

7.21 K

Cinque Terre

0

ಸಂಬಂಧಿತ ಸುದ್ದಿ