ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದಾಳಿ - 3 ಲಕ್ಷ‌ ಮೌಲ್ಯದ ಅಕೇಶಿಯಾ ಜಾತಿಯ ನಾಟ ವಶ

ಶಿರಸಿ: ವಲಯ ಅರಣ್ಯಾದಿಕಾರಿಗಳು ನಡೆಸಿದ  ಕಾರ್ಯಚರಣೆಯಲ್ಲಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕೇಶಿಯಾ ಜಾತಿಯ 92 ನಾಟಗಳನ್ನು  ಆರೋಪಿ ಸಮೇತವಾಗಿ ವಶಪಡಿಸಿಕೊಳ್ಳಲಾಗಿದೆ.

ಚಂದನ್ ವುಡ್ ವರ್ಕ್ಸ್ & ಫರ್ನಿಚರ್ ಹತ್ತಿರ ಲಾರಿ ಮೇಲೆ ಸುಮಾರು 3 ಲಕ್ಷ ಬೆಲೆಯ ನಾಟಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ  ದಾಳಿ ನಡೆದಿದೆ. ದಾಳಿಯಲ್ಲಿ  ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಮಾದೇವ ರಾಮಚಂದ್ರ ವಡ್ಡಾ ಹಾಗು ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಅಜ್ಜಯ್ಯ,ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾದಿಕಾರಿ ಅಶೋಕ ಕೆ ಎಚ್ ಹಾಗು ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಎಸ್ ಎಸ್ ನಿಂಗಾಣಿ ಮಾರ್ಗದರ್ಶನ,ಶಿರಸಿ ವಲಯ ಅರಣ್ಯಾದಿಕಾರಿ ಗಿರೀಶ ಎಲ್ ನಾಯ್ಕ ಮತ್ತು ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

Edited By : PublicNext Desk
PublicNext

PublicNext

09/01/2025 07:29 pm

Cinque Terre

9.97 K

Cinque Terre

0

ಸಂಬಂಧಿತ ಸುದ್ದಿ