ಭಟ್ಕಳ : ತಾಲೂಕಿನ ಬಿಲಾಲಖಂಡದ ಗುಳ್ಳಿಯ ನಿವಾಸಿ ಮಹ್ಮದ್ ರಯ್ಯಾನ್ ಮಹ್ಮದ್ ಶಬ್ಬಿರ್ (20) ಬಂಧಿತ ಆರೋಪಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿರುವ ಈತನನ್ನ ಸಂಶಯದ ಮೇಲೆ ಪೊಲೀಸರು ಆಸರಕೇರಿಯ ಪಶುಪತಿ ದೇವಸ್ಥಾನದ ಹತ್ತಿರ ವಶಕ್ಕೆ ಪಡೆದಿದ್ದರು. ಈತನ ಬಾಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಮಾದಕ ಸೇವನೆ ಮಾಡಿದ ಸಂಶಯದ ಮೇಲೆ ಪಿಎಸೈ ನವೀನ ನಾಯ್ಕ ವಶಕ್ಕೆ ಪಡೆದಿದ್ದರು.
ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.
Kshetra Samachara
09/01/2025 01:48 pm