ಸಿದ್ದಾಪುರ:
ಸಿದ್ದಾಪುರ ತಾಲೂಕಿನ ಬಲ್ಲಟ್ಟೆ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್ಸಿನ ಎಕ್ಸೆಲ್ ತುಂಡಾಗಿ ಬಸ್ ಗದ್ದೆಗೆ ನುಗ್ಗಿ ಒರಗಿ ನಿಂತ ಘಟನೆ ನಡೆದಿದೆ.
ಬಸ್ಸಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದು, 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸದೇ ಅನಾಹುತ ತಪ್ಪಿದೆ.
ಶಿರಸಿ ಹರಿಶಿ ಚಂದ್ರಗುತ್ತಿ ಮಾರ್ಗವಾಗಿ ಸಿದ್ದಾಪುರಕ್ಕೆ ಚಲಿಸುತ್ತಿತ್ತು ಎನ್ನಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಬಸ್ಸಗಳು ಕೆಟ್ಟು ರಸ್ತೆಮದ್ಯ ನಿಲ್ಲುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಸಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಅವರು
ಬಸ್ ಕೆಟ್ಟು ನಿಲ್ಲುವುದಕ್ಕೆ ಡಿಸಿ ಮತ್ತು ಡಿಪೊ ವ್ಯವಸ್ಥಾಪಕರ ನಿರ್ಲಕ್ಷವೇ ಕಾರಣ ಎಂದಿದ್ದಾರೆ.
Kshetra Samachara
02/01/2025 12:06 pm