ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ವೃದ್ಧೆಯ ಕೊಲೆ ಪ್ರಕರಣ - ಆರೋಪಿಯನ್ನು ಬಂಧಿಸಿದ ಪೊಲೀಸರು

ಸಿದ್ದಾಪುರ: ಪಟ್ಟಣದಲ್ಲಿ ವೃದ್ಧೆಯನ್ನು ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿಜಿತ್ ಗಣಪತಿ ಮಡಿವಾಳ ಕೊಂಡ್ಲಿ (30) ಬಂಧಿತ ಆರೋಪಿ. ಸೊರಬ ರಸ್ತೆಯ ಬಸವಣ್ಣ ಗಲ್ಲಿ ನಿವಾಸಿ ಗೀತಾ ಹುಂಡೇಕರ್ ಕೊಲೆಯಾದ ಮಹಿಳೆಯಾಗಿದ್ದು, ಈಕೆಯು ಖಾಸಗಿ ಬ್ಯಾಂಕ್ ಒಂದರಲ್ಲಿ ಪಿಗ್ಮಿ ಸಂಗ್ರಹಕಳಾಗಿ ಕೆಲಸ ಮಾಡುತ್ತಿದ್ದಳು. ಡಿಸೆಂಬರ್ 23ರ ಸೋಮವಾರ ಆರೋಪಿ ಅಭಿಜಿತ್ ವೃದ್ಧೆ ಮನೆಗೆ ಬರುವ ಮುನ್ನವೇ ಮನೆಯಲ್ಲಿ ಹಂಚು ತೆಗೆದು ಒಳಗೆ ಅವಿತುಕೊಂಡಿದ್ದ. ಆಕೆಯು ಮನೆಗೆ ಬರುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿ ಕಿವಿಯಲ್ಲಿದ್ದ ಬಂಗಾರದ ಆಭರಣ ಹಾಗೂ ಪಿಗ್ಮಿಯಿಂದ ಸಂಗ್ರಹವಾದ ನಗದು ಹಣ ದೋಚಿ ಪರಾರಿಯಾಗಿದ್ದ.

ಈ ಸಂಬಂಧ ಡಿಸೆಂಬರ್ 25ರಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ಎರಡು ತಂಡಗಳನ್ನಾಗಿ ರಚಿಸಿ ಕಾರ್ಯಾಚರಣೆ ನಡೆಸಿ ಡಿಸೆಂಬರ್ 30ರಂದು ಆರೋಪಿಯನ್ನ ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.

ಆರೋಪಿ ಅಭಿಜಿತ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಕಳ್ಳತನ, ಹೊಡೆದಾಟ ಸೇರಿದಂತೆ 5 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಮೂರು ಪ್ರಕರಣಕ್ಕೆ ಶಿಕ್ಷೆಯಾಗಿತ್ತು. ಊರಿನಲ್ಲಿ ಪ್ರತಿ ವರ್ಷ ಕಾರ್ತಿಕ ಬಂದ ಸಂದರ್ಭದಲ್ಲಿ ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕೊಲೆ ಆರೋಪಿ ಜೈಲಿಗೆ ಸೇರಿದ್ದು ಕೊಲೆ ಘಟನೆಯಿಂದ ಭಯ ಭೀತರಾಗಿದ್ದ ಜನ ನಿಟ್ಟುಸಿರು ಬಿಡುವಂತಾಗಿದೆ.

Edited By : Vijay Kumar
Kshetra Samachara

Kshetra Samachara

31/12/2024 05:21 pm

Cinque Terre

32.98 K

Cinque Terre

0