ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟ್ಟಣದಲ್ಲಿನ ಅನಧಿಕೃತ ಅಂಗಡಿ ತೆರವು ಮಾಡಿ

ಸಿದ್ದಾಪುರ : ಪಟ್ಟಣದ ರಾಜಮಾರ್ಗದಲ್ಲಿ ಮಂಗಳವಾರ ಬುಧವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ಇಡದಂತೆ ನೋಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಕೆ ಜಿ ನಾಯ್ಕ್ ಹಣಜಿ ಬೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ ತಿಳಿಸಿದರು.

 ಪಟ್ಟಣದ ರಾಜಮಾರ್ಗದಲ್ಲಿ ಸದಾ ವಾಹನದಟ್ಟಣೆಯಿಂದ ಕೂಡಿರುತ್ತದೆ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ಇಡುವುದು ಮತ್ತು ಅಂಗಡಿಕಾರರು ತಮ್ಮ ಅಂಗಡಿಯ ವಸ್ತುಗಳನ್ನು ಇಡುವುದರಿಂದ ಪಾದಾಚಾರಿಗಳು ರಸ್ತೆ ಮೇಲೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಇದರಿಂದ ಇನ್ನಷ್ಟು ಟ್ರಾಫಿಕ್ ಸಮಸ್ಯೆ ಮತ್ತು ಅಪಾಯಗಳು ಆಗುತ್ತದೆ ಹಾಗಾಗಿ ಕೂಡಲೇ ಅಂತ ಅಂಗಡಿಗಳ ಮತ್ತು ವಸ್ತುಗಳನ್ನು ತೆರೆವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಪಟ್ಟಣದಲ್ಲಿ ಏಕಮುಖ ಸಂಚಾರ ರಸ್ತೆಗಳಿಗೆ ನಾಮಫಲಕವನ್ನು ಅಳವಡಿಸಿ ಪಟ್ಟಣ ಪಂಚಾಯತ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಆ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಅಂಗಡಿಗಳನ್ನು ತೆರೆವು ಮಾಡಲಾಗುತ್ತದೆ ಎಂದರು.

 ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ್  ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಉಪಾಧ್ಯಕ್ಷ ವಿನಯ ಹೊನ್ನೇಗುಂಡಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್  ಸದಸ್ಯರುಗಳಾದ ಮಾರುತಿ ನಾಯ್ಕ್, ಗುರುರಾಜ್ ಶಾನಭಾಗ್ ನಂದನ್ ಬೋರ್ಕರ್ ಮತ್ತು ಮಹಿಳಾ ಸದಸ್ಯರು ನಾಮ ನಿರ್ದೇಶಿತ  ಸದಸ್ಯರಾದ ಕೆ ಟಿ ಹೊನ್ನೇಗುಂಡಿ,  ಪ್ರಶಾಂತ್ ಹೊಸೂರ್ ಚಂದ್ರು ಕಾನಡೆ ಮುಖ್ಯ ಅಧಿಕಾರಿ ಜೆ ಆರ್ ನಾಯ್ಕ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/01/2025 05:28 pm

Cinque Terre

6.1 K

Cinque Terre

0