ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ: ಲಾರಿ ಡಿಕ್ಕಿ- ಪಾದಚಾರಿ ಸ್ಥಳದಲ್ಲೇ ಸಾವು

ಯಲ್ಲಾಪುರ : ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ತೋಟಗಾರಿಕಾ ಇಲಾಖೆ ಕಚೇರಿ ಎದುರು ಹೆದ್ದಾರಿಯಲ್ಲಿ ನಡೆದಿದೆ.

ಆರೋಪಿ ಲಾರಿ ಚಾಲಕ ವಿಜಯಪುರದ ಶರಣಯ್ಯ ತಂದೆ ರೇವಯ್ಯ ಹಿರೇಮಠ ಎಂಬಾತ ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಮುಂದೆ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಲಾರಿಯು ಪಾದಚಾರಿಗೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ರಸ್ತೆಯ ಬದಿಯಿಂದ ನಡೆದುಕೊಂಡುಹೋಗುತ್ತಿದ್ದ ಪಾದಚಾರಿ ಯಲ್ಲಪ್ಪ ತಂದೆ ಭರ್ಮಾಜಿ ಗಣಾಚಾರಿ ಎಂಬಾತನಿಗೆ ಲಾರಿ ಡಿಕ್ಕಿಯಾಗಿದೆ, ತಲೆಗೆ ಭಾರೀ ಗಾಯವಾಗಿ ಯಲ್ಲಪ್ಪ ಗಣಾಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Edited By : PublicNext Desk
Kshetra Samachara

Kshetra Samachara

05/01/2025 01:35 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ