ಯಲ್ಲಾಪುರ: ಬೈಕಿಗೆ ಬಸ್ ಡಿಕ್ಕಿಯಾದ ಪರಿಣಾಮ ಬೈಕಿನ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಬಿಸಗೋಡ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ನಡೆದಿದೆ.
ಆರೋಪಿ ಬಸ್ ಚಾಲಕ ಕಲಘಟಗಿಯ ಸಂಗಯ್ಯ ತಂದೆ ಗುರುಪಾದಯ್ಯ ದೊಡ್ಡವಾಡ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಹೋಗಿ, ಬಸ್ಸಿನ ವೇಗವನ್ನು ನಿಯಂತ್ರಿಸಲಾಗದೇ ಎದುರಿನಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬಸವರಾಜ ಹನುಮಂತಪ್ಪ ಬ್ಯಾಡಗಿ ಎಂಬಾತ ಚಲಾಯಿಸುತ್ತಿದ್ದ ಬೈಕ್ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಯಲ್ಲಾಪುರ ಪಟ್ಟಣದ ಉದ್ಯಮನಗರದ ನಿವಾಸಿ 45 ವರ್ಷದ ಕಸ್ತೂರಿ ಕೋಂ ಬಸವರಾಜ ಬ್ಯಾಡಗಿ ಹಾಗೂ 12 ವರ್ಷದ ಕೋಮಲ ಭೋವಿವಡ್ಡರ್ ಕೆಳಗೆ ಬಿದ್ದು, ಬಸ್ಸಿನ ಟಾಯರ್ ಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಬಸವರಾಜ ಹನುಮಂತಪ್ಪ ಬ್ಯಾಡಗಿ ಗಂಭೀರ ಗಾಯಗೊಂಡಿದ್ದು, ಅಪಘಾತದಲ್ಲಿ ಬೈಕ್ ಹಾಗೂ ಬಸ್ ಜಕಂಗೊಂಡಿವೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/12/2024 11:59 am