ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆಬ್ರುವರಿ 11 ರಿಂದ 18 ರವರೆಗೆ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ

ಸಿದ್ದಾಪುರ: ಸರ್ವ ಜಾತಿ-ಧರ್ಮಗಳು ಒಂದಾಗಿ ಸಾಮರಸ್ಯದಿಂದ ಆಚರಿಸುವ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆಬ್ರುವರಿ 11 ರಿಂದ 18 ರವರೆಗೆ ವಿಜೃಂಭಣೆಯಿಂದ ಜರುಗಲಿದೆ‌.

ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾರಿಕಾಂಬಾ ದೇವಾಲಯದ ಜಾತ್ರಾ ಸಮಿತಿ ಅಧ್ಯಕ್ಷ ಕೆರಿಯಾ ಸಣ್ಣಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ ಮಾಹಿತಿ ನೀಡಿ, ಕಾನಗೋಡ, ಹಳ್ಳಿಬೈಲ್, ವಡಗೇರಿ, ಗುತ್ತಿಮನೆ, ಗಣೇಶನಗರ, ಬಸ್ತಿಕೊಪ್ಪ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಆಲಳ್ಳಿ ಗ್ರಾಮವನ್ನು ಒಳಗೊಂಡು ಪ್ರತಿ ಏಳು ವರ್ಷಕ್ಕೊಮ್ಮೆ ನಡೆಯುವ ಕಾನಗೋಡ ಮಾರಿಕಾಂಬಾ ದೇವಿಯ ಜಾತ್ರೆ ಈ ಬಾರಿ ಫೆ. 11 ರಿಂದ 18 ರವರೆಗೆ ಒಂದು ವಾರಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಲಿದೆ. ಪ್ರತಿ ದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ರವರೆಗೆ ದೇವಿಯ ಪೂಜಾ ಕಾರ್ಯಕ್ರಮ ನೆರವೇರಲಿದೆ.

ಪ್ರತಿ ದಿನ ಸಂಜೆ ಸಂಜೆಯಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ‌. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಕಾನಗೋಡಿನ ವಿಷಾಲವಾದ ಕೆರೆಯಲ್ಲಿ ಬೋಟಿಂಗ್ ನಡೆಯಲಿದೆ. ಊರಿನ ರಸ್ತೆಗಳು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಕ್ಕಾಗಿ ಶಾಸಕರಿಗೆ ಮನವಿ ಮಾಡಲಾಗಿದೆ. ಜಾತ್ರೆಯ ಸಂಬಂಧ ವಿವಿಧ ಸಮಿತಿಗಳನ್ನು ರಚಿಸಲಾಗುವುದು

ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಜಾತ್ರಾ ಸಮಿತಿಯ ಅಣ್ಣಪ್ಪ ವಡಗೇರಿ, ಸುರೇಶ ಶೇಟ್, ಕೇಶವ ದೊಡ್ಮನೆ, ಪ್ರವೀಣ ದೊಡ್ಮನೆ, ನಾಗರಾಜ ಕಾನಳ್ಳಿ, ಈಶ್ವರ ಸಣ್ಣಟ್ಟಿ ಹಾಗೂ ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/01/2025 07:32 pm

Cinque Terre

5 K

Cinque Terre

0