ಸಿದ್ದಾಪುರ: ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಬಸ್ ದರ, ಹಾಲಿನ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದೆ ದರ ಏರಿಕೆ ಖಂಡಿಸಿ ಸಿದ್ದಾಪುರ ಬಿಜೆಪಿ ಮಂಡಲ ವತಿಯಿಂದ ತಹಸೀಲ್ದಾರ್ ಕಛೇರಿ ಪ್ರತಿಭಟನೆ ನಡೆಸಿದರು.
ಗ್ಯಾರಂಟಿ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ, ಗ್ಯಾರಂಟಿ ಯೋಜನೆ ಇನ್ನು ಸರಿಯಾಗಿ ಫಲಾನುಭವಿ ಗಳಿಗೆ ತಲುಪುತ್ತಿಲ್ಲ, ಗ್ಯಾರಂಟಿ ಹೆಸರಿನಲ್ಲಿ ಎಲ್ಲಾ ಕಡೆಯಿಂದ ಕಿತ್ತುಕೊಳ್ಳುವ ಹುನ್ನಾರ ಮಾಡುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಆರೋಪಿಸಿದರು. ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ್, ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ನಂದನ್ ಬೋರ್ಕರ್ ಮತ್ತಿತರರು ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು ಮತ್ತು ಗುತ್ತಿಗೆದಾರರ ಅಧಿಕಾರಿಗಳ ಆತ್ಮಹತ್ಯೆ ಖಂಡಿಸಿದರು. ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಗೆ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Kshetra Samachara
06/01/2025 01:30 pm