ಸಿದ್ದಾಪುರ : ತಾಲೂಕಿನ ಬೇಡ್ಕಣಿಯಲ್ಲಿ ಶನಿವಾರ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಹಾಗೂ ಮಾಲಾಧಾರಿ ಸ್ವಾಮಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಭಕ್ತರು ದೇವರಿಗೆ ಹಣ್ಣು ಕಾಯಿ ಹಾಗೂ ಇತರೆ ಸೇವೆ ಸಲ್ಲಿಸಿ ತೀರ್ಥ ಪ್ರಸಾದ ಪಡೆದು ಅನ್ಯಪ್ರಸಾದ ಸ್ವೀಕರಿಸಿದರು. ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು ಮಾಲಾಧಾರಿ ಸ್ವಾಮಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸಿದರು. ಅಯ್ಯಪ್ಪ ದೇವರಿಗೆ ಮಾಡಿದ ಹೂವಿನ ಅಲಂಕಾರ ವಿಶೇಷವಾಗಿ ಗಮನ ಸೆಳೆಯಿತು.
Kshetra Samachara
04/01/2025 03:00 pm