ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರದಲ್ಲಿ ಉಪನ್ಯಾಸಕರ ಮೇಲೆ ಹಲ್ಲೆ ಸಿದ್ದಾಪುರದಲ್ಲಿ ಖಂಡನೆ

ಸಿದ್ದಾಪುರ : ಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಜು ಅವರ ಮೇಲೆ ನಡೆದ ಹಲ್ಲೆಯನ್ನ ಬಿ ಎಸ್ ಎನ್ ಡಿ ಪಿ ಸಿದ್ದಾಪುರ ಘಟಕ ವು ಖಂಡಿಸಿ ತಪ್ಪಿತಸ್ತರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.

ಬಿ ಎಸ್ ಎನ್ ಡಿ ಪಿ ತಾಲೂಕ ಅಧ್ಯಕ್ಷ ವಿನಾಯಕ ನಾಯ್ಕ್ ದೊಡಗದ್ದೆ ಮಾತನಾಡಿ ಕ್ಷುಲ್ಲಕ ಕಾರಣಕ್ಕೆ ಉಪನ್ಯಾಸಕರ ಮೇಲೆ ನಡೆದ ಹಲ್ಲೆ ಘಟನೆಯನ್ನ ಸಂಘಟನೆ ವತಿಯಿಂದ ಖಂಡಿಸುತ್ತೇವೆ ಸಣ್ಣ ಪುಟ್ಟ ವಿಷಯಗಳಿಗೆ ಉಪನ್ಯಾಸಕರ ಹಲ್ಲೆ ಮಾಡಿದರೆ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಕೂಡಲೇ ಹಲ್ಲೆ ನಡೆಸಿದವರನ್ನ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಲಕ್ಷಣ ನಾಯ್ಕ್, ಜಿ ಟಿ ನಾಯ್ಕ್,ಅನಿಲ್ ಕೊಠಾರಿ, ತಿರುಮಲ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/12/2024 03:32 pm

Cinque Terre

5.96 K

Cinque Terre

0

ಸಂಬಂಧಿತ ಸುದ್ದಿ