ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ತಾಲೂಕ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಡಿಸೇಂಬರ್ 30 ರಂದು ಪಟ್ಟಣದ ಶಂಕರ ಮಠದಲ್ಲಿ ನಡೆಯಲಿರುವ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಆಮಂತ್ರಣ ಪತ್ರಿಕೆ ಮತ್ತು ಲಾಂಛನ ಬಿಡುಗಡೆಗೊಳಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳು ಮುಖಂಡರುಗಳು ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಮ್ ಆರ್ ಕುಲ್ಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ಕೆ ಜಿ ನಾಗರಾಜ್, ಇ ಓ ದೇವರಾಜ್ ಹಿತ್ಲಕೊಪ್ಪ, ಕಸಾಪ ತಾಲೂಕ ಅಧ್ಯಕ್ಷ ಗೋಪಾಲ್ ಭಾಷಿ, ಪದಾಧಿಕಾರಿಗಳಾದ ಅಣ್ಣಪ್ಪ ನಾಯ್ಕ್ ಶಿರಳಗಿ, ಪಿಬಿ ಹೊಸೂರ್, ಚಂದ್ರಶೇಖರ್ ಕುಂಬ್ರಿಗದ್ದೆ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/12/2024 04:53 pm

Cinque Terre

5.48 K

Cinque Terre

0

ಸಂಬಂಧಿತ ಸುದ್ದಿ