ಸಿದ್ದಾಪುರ : ಕಳೆದ 30 ವರ್ಷಗಳಿಂದ ಸಿದ್ದಾಪುರ ಪಟ್ಟಣದಲ್ಲಿ ಪಿಗ್ಮಿ ಸಂಗ್ರಹಕಳಾಗಿ ನನ್ನ ಅತ್ತೆ ಗೀತಾ ಹುಂಡೇಕರ್ ರವರು ಕೆಲಸ ಮಾಡುತ್ತಿದ್ದರು, ಬಾಳ ಕಷ್ಟಪಟ್ಟು ಸ್ವಾಭಿಮಾನಿಯಾಗಿ ಜೀವನ ನಡೆಸುತ್ತಿದ್ದ ಅವರು ಈ ರೀತಿ ದುರಂತ ಸಾವು ಕಂಡಿರುವುದು ನಮಗೆಲ್ಲ ನೋವಾಗಿದೆ ಎಂದು ಸಿದ್ದಾಪುರ ಪಟ್ಟಣದಲ್ಲಿ ಇತ್ತೀಚಿಗೆ ಕೊಲೆಯಾಗಿ ಮೃತಪಟ್ಟ ಪಿಗ್ಮಿ ಸಂಗ್ರಾಹಕಿ ಗೀತಾ ಹುಂಡೇಕರ್ ಅವರ ಅಳಿಯ ರಾಘವೇಂದ್ರ ಅವರು ತಮ್ಮ ನೋವನ್ನು ಹಂಚಿಕೊಂಡರು.
ನನ್ನಲ್ಲಿ ಶಕ್ತಿ ಇರುವವರೆಗೂ ನಾನು ದುಡಿದು ಬದುಕುತ್ತೇನೆ ಎಂದು ನಮ್ಮ ಬಳಿ ಹೇಳುತ್ತಿದ್ದರು. ಕೊಲೆಯಾದ ವಿಷಯ ತಿಳಿದ ನಮಗೆ ಒಮ್ಮೆ ಗಾಬರಿ ಆಯ್ತು ಪೊಲೀಸರಿಗೆ ಮಾಹಿತಿ ನೀಡಿದೆವು ಪೊಲೀಸರು ಈ ವಿಷಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪ್ರಕರಣ ದಡಮುಟ್ಟಿಸಿದ್ದಾರೆ ಸಹಕರಿಸಿದ ನನ್ನ ಸ್ನೇಹಿತರಿಗೆ ಹಾಗೂ ಪೊಲೀಸರಿಗೆ ಈ ಸಂದರ್ಭದಲ್ಲಿ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.
Kshetra Samachara
04/01/2025 01:23 pm