ಶಿರಸಿ: ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ತನ್ನ ಅತ್ತೆಯನ್ನು ಕೊಲೆಮಾಡಿದ ಆರೋಪಿ ಸುರೇಶ ದಾದಾರಾವ ಸಿಂದೆ ಈತನಿಗೆ ಶಿರಸಿ ನಗರದ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಇವರು ಜೀವಾವದಿ ಶಿಕ್ಷೆ ಹಾಗು 36 ಸಾವಿರ ರೂ ದಂಡ ಮತ್ತು ಮೃತರ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡುವ ಆದೇಶ ಹೊರಡಿಸಿದ್ದಾರೆ.
ಹತ್ಯೆಯ ಘಟನೆ 2016ರ ಡಿ.15 ರಂದು ಮೈನಳ್ಳಿಯಲ್ಲಿ ನಡೆದಿತ್ತು. ಆರೋಪಿಯು ತನ್ನ ಮಗಳನ್ನು ಚೆನ್ನಾಗಿ ನೋಡಿಕೊ ಎಂದು ಹೇಳಿದ ಮಾವನಿಗೆ ಸಿಟ್ಟಿನಿಂದ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ತಪ್ಪಿಸಲು ಬಂದಿದ್ದ ಅತ್ತೆ ತುಳಸಾಬಾಯಿಗೆ ಸಲಿಕೆಯ ಕಟ್ಟಗೆಯ ಕಾವಿನಿಂದ ಹೊಡೆದು ಕೊಲೆಮಾಡಿದ್ದನು. ಈ ಪ್ರಕರಣದ ವಾದವನ್ನು ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ರಾಜೇಶ ಮಳಗಿಕರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಪೋಲಿಸ್ ನಿರೀಕ್ಷಕ ಕಿರಣಕುಮಾರ ನಾಯಕ್ ಅವರು ದೋಶಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಸದ್ಯ ವಿಚಾರಣೆ ನಡೆಸಿದ ನ್ಯಾಯಾಲಯವು ಶಿಕ್ಷೆ ಪ್ರಕಟ ಮಾಡಿದೆ.
Kshetra Samachara
06/01/2025 02:48 pm