ಕಾರವಾರ: ಅರಣ್ಯ ಭೂಮಿಯ ಹಕ್ಕು ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಕಾನೂನು ಬಾಹೀರವಾಗಿ ಪರಿಶೀಲನೆ ಮಾಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ 50 ಸಾವಿರಕ್ಕೂ ಹೆಚ್ಚು ವಯಕ್ತಿಕ ಆಕ್ಷೇಪಣೆ ಪತ್ರ ಸಲ್ಲಿಸಲು ಮುಂದಾಗಿದ್ದೇವೆ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿಗಳ ಪುನರ್ ಪರೀಶಿಲನೆಗೆ ಸಂಬಂಧಿಸಿದಂತೆ ಉಪ ವಿಭಾಗ ಹಾಗೂ ಜಿಲ್ಲಾ ಅರಣ್ಯ ಸಮಿತಿಯ ನಿಯಮಾವಳಿಯಲ್ಲಿ ಆರು ಸದಸ್ಯರು ಇರಬೇಕು ಎನ್ನುವ ಕಾನೂನಿದೆ. ಆದರೆ ಸದ್ಯ ಜಿಲ್ಲೆಯ ಸಮಿತಿಯಲ್ಲಿ ಮೂರು ಸದಸ್ಯರಿದ್ದಾರೆ. ಹೀಗಾಗಿ ಅರ್ಜಿಗಳನ್ನು ಪರಿಶೀಲನೆ ಮಾಡಲು ಸಾದ್ಯವಿಲ್ಲ. ಇದು ಕಾನೂನಿಗೆ ಪೂರಕವಲ್ಲ ಎಂದರು.
ಕೇಂದ್ರ ಸರಕಾರದ ಬುಡಕಟ್ಟು ಮಂತ್ರಾಲಯವು ಪಾರಂಪರಿಕ ಅರಣ್ಯ ವಾಸಿಗಳ ಅರ್ಜಿಗಳನ್ನು ವಿಚಾರಣೆ ಮಾಡುವಾಗ ಮೂರು ತಲೆಮಾರಿನ ದಾಖಲೆಗಳು ಪರಿಶೀಲನೆ ಮಾಡುವುದು ತಪ್ಪು ಎಂದು ಸ್ಪಷ್ಠನೆ ನೀಡಿದೆ. ಆಯಾ ಪ್ರದೇಶದ ಮೂರು ತಲೆಮಾಗಿನ ಜನವಸತಿ ಇದ್ದರೆ ಸಾಕು ಎನ್ನುವ ನಿಯಮವಿದೆ. ಪೂರಕವಾಗಿ ಗುಜರಾತ್ ಹೈಕೋರ್ಟ್ ಕೂಡ ಈ ನಿಯಮ ತಪ್ಪು. ಪುನರ್ ಪರಿಶೀಲನೆ ಮಾಡಬೇಕು ಎಂದು ಆದೇಶ ಮಾಡಿದೆ. ಆದರೆ ರಾಜ್ಯದಲ್ಲಿ ಈ ಕಾನೂನು ಪಾಲನೆ ಆಗುತ್ತಿಲ್ಲ.
ಈ ಹಿನ್ನಲೆಯಲ್ಲಿ ಜನೆವರಿ 6 ರಿಂದ ಜಿಲ್ಲೆಯಿಂದ ಸುಮಾರು 50 ಸಾವಿರ ಅರಣ್ಯ ವಾಸಿಗಳಿಂದ ವಯಕ್ತಿಕವಾಗಿ ಆಕ್ಷೇಪಣೆ ಪತ್ರ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
Kshetra Samachara
06/01/2025 06:04 pm