ಭಟ್ಕಳ: ಕಳೆದ ವರ್ಷ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಮುರುಡೇಶ್ವರ ಕಡಲ ತೀರಕ್ಕೆ ಹೊಸ ವರ್ಷದ ಮೊದಲ ದಿನದಂದು ಪ್ರವಾಸಿಗರಿಗೆ ತೆರಳಲು ಮುಕ್ತ ಮಾಡಿದ್ದಾರೆ.
ಹೊಸವರ್ಷದ ಆಚರಣೆ ಬಳಿಕ ಜನವರಿ 1 ಬುಧವಾರ ಸಂಜೆ 5 ಗಂಟೆಯಿಂದ ಸುರಕ್ಷತಾ ಕ್ರಮ ವಹಿಸಿ ಪ್ರವಾಸಿಗರಿಗೆ ಕಡಲ ತೀರಕ್ಕೆ ತೆರಳಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದ್ದಾರೆ.
ಕಡಲ ತೀರಕ್ಕೆ ತೆರಳಲು ಅನುವು ಮಾಡುತ್ತಿದ್ದಂತೆ ಪ್ರವಾಸಿಗ ದಂಡೇ ಸಮುದ್ರ ತೀರಕ್ಕೆ ಧಾವಿಸಿ ಬಂತು.
ಇದಕ್ಕೂ ಪೂರ್ವದಲ್ಲಿ ಅಲ್ಲಿನ ಕೆಲ ಅಂಗಡಿಕಾರರು ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕಡಲ ತೀರಕ್ಕೆ ಪ್ರವಾಸಿಗರು ತೆರಳುವ ಮುನ್ನ ಇಡುಗಾಯಿ ಒಡೆದು ಪಟಾಕಿ ಸಿಡಿಸುವ ಮೂಲಕ ಕಡಲ ತೀರ ತೆರೆಯಲಾಯಿತು.
ಸುರಕ್ಷತಾ ದೃಷ್ಟಿಯಿಂದ ಸ್ಪೀಡ್ ಬೋರ್ಡ್, 12 ಮಂದಿ ಲೈಫ್ ಗಾರ್ಡ್ಸ್, ಲೈಫ್ ಜಾಕೆಟ್, ಆಕ್ಸಿಜನ್ ಕಿಟ್ಸ್ ಹಾಗೂ 250 ಮೀಟರ್ ನಲ್ಲಿ ಸ್ವಿಮ್ಮಿಂಗ್ ಜೋನ್ ನಿರ್ಮಾಣ ಮಾಡಿ
ಸುರಕ್ಷತಾ ಸಲಕರಣೆಗಳನ್ನು ನೀಡಿದ್ದಾರೆ.
ಭಟ್ಕಳ ಸಹಾಯಕ ಆಯುಕ್ತರು ಮುರುಡೇಶ್ವರ ಪೊಲೀಸರಿಗೆ ಕಡಲ ತೀರ ತೆರೆಯಲು ಮೌಖಿಕ ಆದೇಶ ನೀಡಿದ ಬೆನ್ನಲ್ಲೇ ಪೊಲೀಸರು ಕಡಲ ತೀರಕ್ಕೆ ಪ್ರವಾಸಿಗರಿಗೆ ಪ್ರವೇಶಿಸಲು ಬುಧವಾರ ಸಂಜೆಯಿಂದ ಅನುಮತಿ ನೀಡಿದ್ದಾರೆ.
PublicNext
02/01/2025 07:53 am