ಶಿರಸಿ : ತಾಲೂಕಿನ ಜಾನ್ಮನೆ ವಲಯದ ಸರಗುಪ್ಪ ಶಾಖಾ ವ್ಯಾಪ್ತಿಯ ಬೆಣಗಾಂವ್ ಗ್ರಾಮದಲ್ಲಿ ಚಿರತೆಯೊಂದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಅಜ್ಜಯ್ಯ ಹಾಗು ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಹರೀಶ ಸಿ ಎನ್ ಸಮಕ್ಷಮ ಪಶುವೈದ್ಯ ಡಾ.ಪ್ರಶಾಂತ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಮೃತಪಟ್ಟ ಚಿರತೆಯು ಗಂಡು ಚಿರತೆಯಾಗಿದ್ದು ಸ್ವಾಭಾವಿಕವಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಬಳಿಕ ಅರಣ್ಯ ಇಲಾಖೆಯಿಂದ ಚಿರತೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಯಿತು.
ಈ ಸಂದರ್ಭದಲ್ಲಿ ಜಾನ್ಮನೆ ಉಪ ವಲಯ ಅರಣ್ಯಾದಿಕಾರಿ ಉಷಾ ರಾಜು ಕಬ್ಬೆರ್, ಸರಗುಪ್ಪ ಶಾಖೆಯ ಉಪ ವಲಯ ಅರಣ್ಯಾದಿಕಾರಿ ವಿನಯಕುಮಾರ ಶಿವಣಗಿ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
Kshetra Samachara
27/12/2024 03:53 pm