ಕುಮಟಾ: ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಸಮುದ್ರದ ಅಲೆಗೆ ಸಿಲುಕಿ ಅಪಾಯದಲ್ಲಿದ್ದ ಇಬ್ಬರೂ ರಷ್ಯಾ ಪ್ರವಾಸಿಗರನ್ನ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಇರೀನಾ (37) ಆನ್ಯ (27) ಸಮುದ್ರದ ಅಲೆಯಲ್ಲಿ ಅಪಾಯಕ್ಕೆ ಸಿಲುಕಿ ರಕ್ಷಣೆಯಾದ ಪ್ರವಾಸಿಗರಾಗಿದ್ದಾರೆ. ಇಬ್ಬರೂ ಕುಡ್ಲೆ ಬೀಚ್‌ನ ಸಮುದ್ರದಲ್ಲಿ ಈಜಲು ಹೋಗಿದ್ದು, ಈಜು ಬರದೆ ಇರುವ ಕಾರಣ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದರು. ಅಪಾಯದಲ್ಲಿರುವುದನ್ನಗಮನಿಸಿದ ಮೈಸ್ಟಿಕ್ (Mystic) ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣ ರಕ್ಷಣೆಗೆ ತೆರಳಿ ಇಬ್ಬರ ಜೀವ ಉಳಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
17/12/2024 05:04 pm