ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾವರ : ಪ್ರವಾಸಿಗರ ಬಸ್ ಪಲ್ಟಿ - ಎಂಟು ಮಂದಿ ಗಂಭೀರ

ಹೊನ್ನಾವರ : ಬೆಂಗಳೂರಿನಿಂದ ಗೊಕರ್ಣಗೆ ಬರುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿಯಾಗಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಬಳಿ ನಡೆದಿದೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದ (ARO1 T -5051)ಬೆನಕ ಟ್ರಾವೇಲ್ಸ್ ಕಂಪನಿಯ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 20 ಮಂದಿ ಪ್ರಯಾಣಿಕರು ಅದರಲ್ಲಿ 8ಮಂದಿಗೆ ಗಂಭೀರವಾಗಿ ಗಾಯವಾಗಿದೆ.

ಗಂಭೀರ ಗಾಯಗೊಂಡ 8ಮಂದಿಯನ್ನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಇನ್ನೂ ಸಣ್ಣಪುಟ್ಟ ಗಾಯಗೊಂಡವನ್ನ 108 ಹಾಗೂ ಖಾಸಗಿ ಅಂಬುಲೆನ್ಸ್‌ ಮೂಲಕ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಘಟನಾ ಸ್ಥಳಕ್ಕೆ ಹೊನ್ನಾವರ ಪಿಎಸ್‌ಐ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Abhishek Kamoji
PublicNext

PublicNext

28/12/2024 12:23 pm

Cinque Terre

21.4 K

Cinque Terre

0

ಸಂಬಂಧಿತ ಸುದ್ದಿ