ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕ ಬಿದ್ದ ಸ್ಥಳದಲ್ಲೇ ಪ್ರತಿಭಟನೆ ಶಿಕ್ಷಕರ ನಿರ್ಲಕ್ಷ್ಯ ಎಂದ ಕುಟುಂಬಸ್ಥರು : ಶಿಕ್ಷಕರನ್ನು ಸ್ಥಳಕ್ಕೆ ಕರೆಯಿಸುವಂತೆ ಆಗ್ರಹ

ಭಟ್ಕಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳದ ವಿದ್ಯಾರ್ಥಿ ಬಾವಿಗೆ ಬಿದ್ದು ಮೃತಪಟ್ಟ ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಯಲಬುರ್ಗಾ ತಾಲೂಕಿನ ಗಾಣದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಮೃತಪಟ್ಟ ಸುದ್ದಿ ಕೇಳಿ ಆತನ ಸಂಬಂಧಿಕರು ಭಟ್ಕಳಕ್ಕೆ ಆಗಮಿಸಿದರು. ಬಾಲಕ ಮೃತಪಟ್ಟ ಸ್ಥಳ ವೀಕ್ಷಿಸಿದ ಸಂಬಂಧಿಕರು ದಿಢೀ‌ರ್ ಆಗಿ ಪ್ರತಿಭಟನೆ ನಡೆಸಿದರು. ಬಾಲಕನ ಸಾವಿಗೆ ಶಿಕ್ಷಕರೇ ಕಾರಣ. ಕಳೆದ ವಾರವಷ್ಟೇ ಮುರ್ಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರವಾಸ ಬೇಡವೆಂದರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಪ್ರತಿ 7 ಮಕ್ಕಳಿಗೆ ಒಬ್ಬ ಶಿಕ್ಷಕರಿರುತ್ತಾರೆ ಎಂದು ನಮ್ಮನ್ನು ಮನವೊಲಿಸಿದ್ದಾರೆ. ಆದರೆ ಶಿಕ್ಷಕರ ತಾರತಮ್ಯ ನೀತಿಯಿಂದ ದಲಿತ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದರು. ತಪ್ಪಿತಸ್ತ ಶಿಕ್ಷಕರನ್ನು ಸ್ಥಳಕ್ಕೆ ಕರೆದುಕೊಂಡು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಸುದ್ದಿ ತಿಳಿದು ತಹಶೀಲ್ದಾರ ನಾಗೇಂದ್ರ ಶೆಟ್ಟಿ, ಶಹರ ಠಾಣೆ ಪಿಐ ಗೋಪಿಕೃಷ್ಣ ಸ್ಥಳಕ್ಕೆ ಆಗಮಿಸಿದರು. ಶಿಕ್ಷಕರ ವಿರುದ್ಧ ದೂರು ಕೊಡಿ, ಪ್ರತಿಭಟನೆ ಬೇಡ ಎಂದು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಸಂಬಂಧಿಕರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಅವರನ್ನು ಅಲ್ಲಿಂದ ಮೃತದೇಹ ಇರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಅಲ್ಲಿಯೂ ಪ್ರತಿಭಟನೆ ಮುಂದುವರಿಸಿದ ಸಂಬಂಧಿಕರು, ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಕೊನೆಗೂ ಆಕ್ರೋಶಿತರನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿ ಕುಟುಂಬಸ್ಥರಿಂದ ದೂರನ್ನು ಸ್ವೀಕರಿಸಿದರು.

ಇದಕ್ಕೂ ಪೂರ್ವದಲ್ಲಿ ಮೃತ ಬಾಲಕನ ಸಂಬಂಧಿಕರು ಉಳಿದ ಸಹಪಾಠಿಗಳು ತಂಗಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದರು.ತಹಶೀಲ್ದಾರ ನಾಗೇಂದ್ರ ಕೋಳಶೇಟಿ,ಡಿವೈಎಸ್ಪಿ ಮಹೇಶ ಕೆ. ಸಮ್ಮುಖದಲ್ಲಿ ಕುಟುಂಬಸ್ಥರು ವಿದ್ಯಾರ್ಥಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.

ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳು ಸದ್ಯ ಭಟ್ಕಳದಲ್ಲಿಯೇ ಇದ್ರೂ ನಿನ್ನೆ ರಾತ್ರಿ ಪ್ರವಾಸಿ ಬಂಗ್ಲೆಯಿಂದ ಅವರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು.

Edited By : Vinayak Patil
PublicNext

PublicNext

19/12/2024 07:17 pm

Cinque Terre

26.35 K

Cinque Terre

0

ಸಂಬಂಧಿತ ಸುದ್ದಿ