ಶಿರಸಿ: ಸಾಗುವಾನಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಕಾಡುಗಳ್ಳ ಆರೋಪಿ ಶಿರಸಿಯ ರಾಜೀವ ನಗರದ ಜಾಕೀರ ಅಹಮ್ಮದ್ ಹಯಾದ್ ಸಾಬ್ ಬೆಣ್ಣೆ ಎಂಬಾತನನ್ನು ಬಂಧಿಸಿ ಮೂರು ಸಾಗವಾನಿ ಮರದ ತುಂಡು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಬನವಾಸಿ ವಲಯದ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಎಕ್ಕಂಬಿ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕರ್ನಲ್, ದಾಸನಕೊಪ್ಪ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೇಕರ್, ಬನವಾಸಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಂಗೆಮತ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
29/12/2024 11:33 am