ಹುಬ್ಬಳ್ಳಿ: ಅಂಗನವಾಡಿಗೆ ಹೋಗಿದ್ದ ಮೂರು ವರ್ಷದ ಮಗು ಹಾವು ಕಚ್ಚಿ ಸಾವನ್ನಪ್ಪಿರುವ ದುರ್ದೈವದ ಘಟನೆಯೊಂದು ನಡೆದಿದೆ.
ಮಯೂರಿ ಎಂಬ 3 ವರ್ಷದ ಬಾಲಕಿ ಹಾವಿ ಕಚ್ಚಿದ ಪರಿಣಾಮ ಮೃತಪಟ್ಟಿದ್ದಾಳೆ. ಈಕೆ ಕಾರವಾರ ಜಿಲ್ಲೆಯ ಮುಂಡಗೋಡು ಅಳೂರು ಗ್ರಾಮದ ನಿವಾಸಿ. ಇಂದು ಅಲ್ಲಿನ ಮಾರಿಕಾಂಬ ಅಂಗನವಾಡಿಗೆ ಹೋಗಿದ್ದ ಮಯೂರಿಗೆ ಹಾವು ಕಚ್ಚಿದೆ. ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ.
ಅಂಗನವಾಡಿ ಶಿಕ್ಷಕಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಹೊರಬದಿಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಮಯೂರಿ ಕಾಲಿಗೆ ಹಾವು ಕಚ್ಚಿದೆ. ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಯೂರಿ ಸಾವಿಗೀಡಾಗಿದ್ದಾಳೆ. ಮಯೂರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Kshetra Samachara
31/12/2024 04:19 pm