ಸಿದ್ದಾಪುರ: ವಾಸದ ಮನೆಗೆ ತಾಗಿಕೊಂಡಿದ್ದ ಹೋಟೆಲ್ ಒಂದಕ್ಕೆ ಸಿಲೆಂಡರ್ ಲೀಕೇಜ್ ನಿಂದಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ನಾಶವಾದ ಘಟನೆ ಸಿದ್ದಾಪುರ ತಾಲೂಕಿನ ಬೀಳಗಿಯಲ್ಲಿ ನಡೆದಿದೆ.
ಬೆಳಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದ್ದು ಹೋಟೆಲ್ನಲ್ಲಿ ಮಂಗಳವಾರ ಮಧ್ಯಾನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿ ಆಗುವ ಹೆಚ್ಚಿನ ಅಪಾಯವನ್ನು ತಡೆದಿದ್ದಾರೆ.
ಬೆಂಕಿಯ ಪರಿಣಾಮವಾಗಿ ಟಿವಿ ಮೊಬೈಲ್ ಅಕ್ಕಿ ಚೀಲ, ಗ್ರೈಂಡರ್ ಮಿಕ್ಸರ್, ರೀಪು, ಪಕಾಸಿ, ಹಂಚುಗಳು ಸೇರಿದಂತೆ ಹಲವು ಮನೆಬಳಕೆಯ ವಸ್ತುಗಳು ನಾಶವಾಗಿವೆ.
PublicNext
31/12/2024 05:01 pm