ಸಿದ್ದಾಪುರ : ಕೀಟನಾಶಕ ಸೇವಿಸಿ ಅಸ್ವಸ್ಥನಾಗಿದ್ದ ವ್ಯಕ್ತಿ ಯೋರ್ವ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ನಡೆದಿದೆ.
ತಿಮ್ಮ ರಾಮ ಗೊಂಡ (48) ಪಡವನಬೈಲ್ (ಅಕ್ಕುಂಜಿ ) ಮೃತ ವ್ಯಕ್ತಿ.
ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ ಈತನು ಗದ್ದೆಗೆ ಹಾಕಲು ಮನೆಗೆ ತಂದು ಇಟ್ಟಿದ್ದ ಕೀಟ ನಾಶಕ ಸೇವಿಸಿ ಅಸ್ವಸ್ಥನಾಗಿದ್ದವನಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ ವೇಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
01/01/2025 11:06 am