ಮುಂಡಗೋಡ: ಅಂಗನವಾಡಿಯ ಆವರಣದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಬಾಲಕಯೋರ್ವಳಿಗೆ ಹಾವು ಕಚ್ಚಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಮಂಗಳವಾರ ಪಟ್ಟಣದ ಮಾರಿಕಾಂಬ ನಗರದಲ್ಲಿ ನಡೆದಿದೆ.
ನಗರದ ಮಯೂರಿ ಸುರೇಶ ಕುಂಬಳೆಪ್ಪನವರ (4) ಮೃತಪಟ್ಟ ಬಾಲಕಿ. ಅಂಗನವಾಡಿಯಲ್ಲಿದ್ದ ಬಾಲಕಿ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಹಾವು ಕಚ್ಚಿದೆ. ಬಾಲಕಿಯ ಕಾಲಲ್ಲಿ ರಕ್ತಸ್ರಾವ ಆಗಿದನ್ನು ಕಂಡ ಅಂಗನವಾಡಿ ಕಾರ್ಯಕರ್ತೆ ಕೂಡಲೆ ತಾಲೂಕ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ 108 ಆಂಬ್ಯುಲೆನ್ಸ್ನಲ್ಲಿ ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಮಾರ್ಗ ಮಧ್ಯೆಯೆ ಬಾಲಕಿ ಮೃತಪಟ್ಟಿರುವುದಾಗಿ ಕಿಮ್ಸ್ ವೈದ್ಯರು ದೃಢಪಡಿಸಿದ್ದಾರೆ.
Kshetra Samachara
31/12/2024 05:04 pm