ಸಿದ್ದಾಪುರ : ತಾಲೂಕಿನ ಬಿಳಗಿ ಮಾರಿಕಾಂಬಾ ದೇವಾಲಯದ ಸಮೀಪವಿರುವ ಶಾಂತರಾಮ ನಾಯ್ಕ ಎನ್ನುವವರ ಮನೆಯ ಆವರಣದ 50 ಅಡಿ ಆಳದ ತೆರೆದ ಬಾವಿಯಲ್ಲಿ ಆಕಸ್ಮಿಕವಾಗಿ ಎತ್ತು ಬಿದ್ದಿತ್ತು ವಿಷಯ ತಿಳಿದ ಸಿದ್ದಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಹಗ್ಗದ ಮೂಲಕ ಬಾವಿಗೆ ಇಳಿದು ಸಾರ್ವಜನಿಕರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.
ಅಗ್ನಿಶಾಮಕದಳದವರಾದ ಮಾಸ್ತಿ ಗೊಂಡ, ನಾಗರಾಜ ಪಟಗಾರ, ಎಂ ಚಂದ್ರಾನಾಯ್ಕ , ಅಗ್ನಿಶಾಮಕ ಚಾಲಕ ಪ್ರಮೋದ ಜೋಗಳೇಕರ, ಕಿರಣ್ ಕುಮಾರ ನಾಯ್ಕ, ವಾಸುದೇವ ವಾಲಿಕಾರ ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದು ಕಾರ್ಯಾಚರಣೆಗೆ ಸಹಕರಿಸಿದರು.
Kshetra Samachara
27/12/2024 09:17 pm