ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ : ಕೊನೆ ಕೊಯ್ಯುತ್ತಿರುವಾಗ ಅಡಿಕೆ ಮರದಿಂದ ಬಿದ್ದ ವ್ಯಕ್ತಿ ಸಾವು

ಸಿದ್ದಾಪುರ :  ಅಡಿಕೆ ಕೊನೆ ಕೊಯ್ಯುತ್ತಿರುವ ವ್ಯಕ್ತಿ  ಆಕಸ್ಮಿಕವಾಗಿ ಅಡಿಕೆ ಮರ ಮುರಿದು ಮರದೊಂದಿಗೆ  ನೆಲಕ್ಕೆ ಬಿದ್ದು ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಗಣಪತಿ ಬೀರಾ  ಗೌಡ ಮತ್ತಿಗಾರ್ (50) ಸಿರಸಿ ಮೃತ ವ್ಯಕ್ತಿ.ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ಅಡಿಕೆ ಮರವೇರಿ ಕೊನೆ ಕೊಯ್ಯುತ್ತಿರುವಾಗ  ಅಡಿಕೆ ಮರ ಆಕಸ್ಮಿಕವಾಗಿ ಮುರಿದು ಮರದೊಂದಿಗೆ  ವ್ಯಕ್ತಿಯು ಸಹ ನೆಲಕ್ಕೆ ಬಿದ್ದು ಗಂಭೀರ ಗಾಯವಾಗಿತ್ತು ಆತನನ್ನು ಚಿಕಿತ್ಸೆ ಕೊಡಿಸಲು  ಆಸ್ಪತ್ರೆಗೆ ಸೇರಿಸಲು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

27/12/2024 09:42 pm

Cinque Terre

8.14 K

Cinque Terre

0