ಯಲ್ಲಾಪುರ: ತಾಲೂಕಿನ ಇಡಗುಂದಿಯ ಸವಿತಾ ಗಜಾನನ ಭಟ್ ಅವರು ಯಲ್ಲಾಪುರ ಬಸ್ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ ಪರ್ಸ್ ಅನ್ನು ಕಳೆದುಕೊಂಡಿದ್ದರು. ಹ್ಯಾಂಡ್ ಪರ್ಸ್ ನಲ್ಲಿ 50 ಸಾವಿರ ರೂ ಮೌಲ್ಯದ ಬಂಗಾರದ ಸರ ಹಾಗೂ ಹಣ ಇತ್ತು. ಈ ಬಗ್ಗೆ ಸವಿತಾ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿ.ಸಿ.ಟಿವಿ ಫೂಟೇಜ್ ಹಾಗೂ ಇನ್ನಿತರ ಮಾಹಿತಿ ಆಧರಿಸಿ ಮಹಿಳೆ ಕಳೆದುಕೊಂಡಿದ್ದ ಹ್ಯಾಂಡ್ ಪರ್ಸ್ ಅನ್ನು ಪೊಲೀಸರು ಹುಡುಕಿಕೊಟ್ಟಿದ್ದಾರೆ. ಬೆಲೆ ಬಾಳುವ ಒಡವೆ ಹಾಗೂ ನಗದು ಹೊಂದಿದ್ದ ಬ್ಯಾಗನ್ನು ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿಸಲಾಗಿದೆ.
Kshetra Samachara
27/12/2024 02:11 pm