ಮೇಷ: ದುಷ್ಟ ಚಟಗಳಿಗೆ ದಾಸರಾಗುವ ಸಂಭವ. ಮಾತನಾಡುವಾಗ ಎಚ್ಚರ. ನೆರೆಯವರೊಂದಿಗೆ ಸೌಹಾರ್ದ ಕಾಪಾಡಿಕೊಳ್ಳಿರಿ.
ವೃಷಭ: ಮನೆ ಕಟ್ಟುವ ಅಥವಾ ಜಾಗ ಖರೀದಿಸುವ ಬಗ್ಗೆ ಒಂದು ನಿರ್ಧಾರಕ್ಕೆ ಬರುವಿರಿ. ಭೂವರಾಹ ಸ್ವಾಮಿಯನ್ನು ಪ್ರಾರ್ಥಿಸಿರಿ.
ಮಿಥುನ: ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಗುರಿಯಾಗುವಿರಿ. ಅನುಭವಿಗಳ ಸಲಹೆ ಅಲಕ್ಷಿಸಬೇಡಿ. ಕಲಾವಿದರಿಗೆ ಉತ್ತಮ ಅವಕಾಶ.
ಕಟಕ: ಸಹಾಯ ಮಾಡಲು ತೊಂದರೆಗೆ ಸಿಲುಕುವಿರಿ. ಅಪರಿಚಿತರೊಂದಿಗೆ ವ್ಯವಹಾರ ಬೇಡ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ.
ಸಿಂಹ: ಉದಾಸೀನ ಪ್ರವೃತ್ತಿಯಿಂದಾಗಿ ಅಡ್ಡ ಪರಿಣಾಮ ಎದುರಿಸಬೇಕಾಗುವುದು. ಈ ದಿನ ನಿಮ್ಮ ಪಾಡಿಗೆ ನೀವಿರುವುದು ಹಿತಕರ.
ಕನ್ಯಾ: ಪ್ರತಿಯೊಂದನ್ನು ಕೂಡ ಆಲೋಚಿಸಿಯೇ ನಿರ್ಧಾರ ತೆಗೆದುಕೊಳ್ಳಿರಿ. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬರಲಿವೆ.
ತುಲಾ: ಅತಿಬುದ್ಧಿವಂತಿಕೆಯಿಂದ ಹಣಕಾಸು ನಷ್ಟ ಸಾಧ್ಯತೆ. ಕೂಡಿಟ್ಟ ಹಣ ಪರರ ಪಾಲಾಗುವುದು. ಪರರ ಮಾತಿಗೆ ಮರುಳಾಗದಿರಿ.
ವೃಶ್ಚಿಕ: ಮಗಳಿಗೆ ಉತ್ತಮ ನೌಕರಿ ದೊರೆಯಲಿದೆ. ವೈದ್ಯರಿಗೆ ಪ್ರೋತ್ಸಾಹ. ಉದ್ಯಮಿಗಳಿಗೆ ಹೊಸ ಯೋಜನೆ ಆರಂಭಿಸಲು ಸೂಕ್ತದಿನ.
ಧನಸ್ಸು: ವಿನಾಕಾರಣ ಶತ್ರುಬಾಧೆ ಬಾಧಿಸಲಿದೆ, ಸಮಾಧಾನವಿರಲಿ. ಆಸ್ತಿ ವಿಚಾರದಲ್ಲಿ ಸೋದರಿಯರು ಕಲಹ ಮಾಡುವ ಸಾಧ್ಯತೆ.
ಮಕರ: ವಿದೇಶ ವ್ಯಾಸಂಗದ ಪೂರ್ವಸಿದ್ಧತೆ ಇರಲಿ. ಮತ್ತೊ ಬ್ಬರ ಸಲಹೆ ಮುಂದೆ ಉಪಯೋಗಕ್ಕೆ ಬರಲಿದೆ. ಅಪರಿಚಿತರೊಂದಿಗೆ ಸ್ನೇಹ.
ಕುಂಭ: ಕೈಗೊಂಡ ಹೊಸ ಕೆಲಸ ಮಂದಗತಿಯಲ್ಲಿ ಸಾಗುವುದು. ಕೃಷಿಕರಿಗೆ ಬಿಡುವಿಲ್ಲದ ಕೆಲಸ. ಬಾಕಿ ಬರಬೇಕಾದ ಹಣ ಬರುವುದು.
ಮೀನ: ಮುಂಬಡ್ತಿ ದೊರೆಯುವ ಸಾಧ್ಯತೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ಪ್ರಗತಿ ಮುದ ನೀಡಲಿದೆ.
PublicNext
04/01/2025 07:18 am