ಮೇಷ ರಾಶಿ: ಕೆಲಸದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ. ಉದ್ಯೋಗದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಕೋಪ-ತಾಪಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಅನಾವಶ್ಯಕವಾದ ಚರ್ಚೆಗಳು ಬೇಡ. ಶತ್ರುಗಳಿಂದ ದೂರ ಉಳಿಯಿರಿ.
ವೃಷಭ: ಸಾಮಾಜಿಕ ಕೆಲಸಗಳಲ್ಲಿ ಅವಕಾಶ ಸಿಗಲಿದೆ. ಪ್ರೇಮಿಗಳಿಗೆ ಶುಭವಿದ್ದರೂ ಸವಾಲುಗಳನ್ನು ಎದುರಿಸಬೇಕಾಗಲಿದೆ. ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ. ನಿಮ್ಮ ಕೆಲಸಕ್ಕೆ ತಕ್ಕ ಗೌರವ ಸಿಗಲಿದೆ. ಮಕ್ಕಳ ಬಗ್ಗೆ ಚಿಂತೆ ಬೇಡ ಶುಭವಿದೆ.
ಮಿಥುನ: ಉದ್ಯೋಗದಲ್ಲಿ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ. ಮೇಲಾಧಿಕಾರಿಗಳ ಸಹಾಯವನ್ನು ಕೇಳುವುದರಿಂದ ಅವಮಾನ ಆಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ. ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ. ಆರ್ಥಿಕ ಸಂಕಷ್ಟಕ್ಕೆ ಅವಕಾಶವಿದೆ.
ಕಟಕ: ವ್ಯಾವಹಾರಿಕವಾಗಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ. ಉದ್ಯೋಗಿಗಳಿಗೆ ಹೊಸ ಉತ್ಸಾಹ. ಸರ್ವಾಂಗೀಣವಾದ ಯಶಸ್ಸಿನ ಸೂಚನೆ ಇದೆ. ಇಂದು ಆರ್ಥಿಕ ಸುಧಾರಣೆಯಾಗಲಿದೆ. ಮಂಗಳ ಕಾರ್ಯದ ಸಂಭ್ರಮ ಇರಲಿದೆ.
ಸಿಂಹ: ಸಾಂಸಾರಿಕ ವಿಚಾರದಲ್ಲಿ ಅತಿಯಾದ ಮಾಧುರ್ಯ, ಪ್ರೀತಿ ಹೆಚ್ಚಾಗುವ ಸಾಧ್ಯತೆ. ಅನುಪಯುಕ್ತವಾದ ಚಟುವಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ವಿದ್ಯಾರ್ಜನೆಯ ಬಗ್ಗೆ ಗಮನವಿರಲಿ. ಪ್ರವಾಸ ಅಥವಾ ಪ್ರಯಾಣ ಬೇಸರ ತರಲಿದೆ.
ಕನ್ಯಾ: ಹಳೆಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಪರಿಸ್ಥಿತಿ. ಆರ್ಥಿಕ ನಷ್ಟದ ಸೂಚನೆ ಇದೆ. ಮಕ್ಕಳ ವಿಚಾರದಲ್ಲಿ ಬೇಸರ ಆಗಲಿದೆ. ಬಂಧುಗಳಲ್ಲಿ ಮನಸ್ತಾಪ ಆಗುವುದರಿಂದ ನಿಮ್ಮ ತಪ್ಪನ್ನು ತೋರಿಸುತ್ತಾರೆ.
ತುಲಾ: ಆರೋಗ್ಯ ಸುಧಾರಣೆಯಾಗಲಿದೆ. ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಲಿದೆ. ಮನೆಯ ಜವಾಬ್ದಾರಿಯಿಂದ ಹೈರಾಣವಾಗುತ್ತೀರಿ. ಮಾನಸಿಕವಾದ ಗಟ್ಟಿತನ ನಿಮಗೆ ಜಯವನ್ನು ತರಲಿದೆ.
ವೃಶ್ಚಿಕ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಿದೆ. ಕುಟುಂಬದ ಚಿಂತೆ ತಾರಕಕ್ಕೇರುತ್ತದೆ. ಸಹೋದ್ಯೋಗಿಗಳಿಂದ ಕಿರುಕುಳವನ್ನು ಅನುಭವಿಸುತ್ತೀರಿ. ಪ್ರಗತಿ ಏನೂ ಕಾಣುತ್ತಿಲ್ಲ ಎಂಬ ಚಿಂತೆ ಕಾಡಲಿದೆ.ಜನರನ್ನು ಮೆಚ್ಚಿಸುವಲ್ಲಿ ವಿಫಲರಾಗುತ್ತೀರಿ.
ಧನಸ್ಸು: ಬೇರೆಯವರ ಸಮಸ್ಯೆಯಲ್ಲಿ ಬಾಗಿಯಾಗುವುದರಿಂದ ಹಿನ್ನಡೆಯಾಗಲಿದೆ. ನಿಮ್ಮ ಮನೆಯ ಸಮಸ್ಯೆಯ ಬಗ್ಗೆ ವಿಚಾರ ಮಾಡಿ. ಹಲವು ಅಸಂಬದ್ಧ ನಿರ್ಧಾರಗಳಿಂದ ಸಮಸ್ಯೆಯಾಗಬಹುದು. ಸಾಂಸಾರಿಕವಾಗಿ ಶೀತಲ ಸಮರವನ್ನು ಎದುರಿಸುತ್ತೀರಿ.
ಮಕರ: ಮನೆಯಲ್ಲಿ ಕೆಲವು ಸಮಸ್ಯೆಗಳಿಗೆ ಗಮನಿಸಿಕೊಳ್ಳಿ. ವ್ಯಾವಹಾರಿಕ ಪ್ರಗತಿಯಿಂದ ಸಂತಸ ಆಗಲಿದೆ. ಜನರ ಸಲಹೆಗಳಿಗೆ ಆದ್ಯತೆ ಇರಲಿ. ಯಾರದ್ದೋ ಸಂಗಡ ಕುಕೃತ್ಯಗಳಿಗೆ ಪ್ರಚೋದನೆ ಬೇಡ. ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತೀರಿ.
ಕುಂಭ: ವ್ಯಾವಹಾರಿಕವಾದ ಸಮಸ್ಯೆ ಉಲ್ಬಣ ಆಗಲಿದೆ. ಜನರು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ. ಮಾನಸಿಕ ಸಂಕಷ್ಟವನ್ನು ಎದುರಿಸುತ್ತೀರಿ. ಹೊಟ್ಟೆ ಅಥವಾ ಎದೆ ನೋವು ಕಾಣಬಹುದು ಜಾಗ್ರತೆವಹಿಸಿ. ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಿ.
ಮೀನ: ಕುಟುಂಬದ ಸದಸ್ಯರ ಬೆಂಬಲವಿದೆ. ಕೈಹಿಡಿದ ಕೆಲಸಕ್ಕೆ ಹೊಸ ಮೆರಗು ಸಿಗಲಿದೆ. ಸಮಾಧಾನದ ನಿಟ್ಟುಸಿರು ಬಿಡುತ್ತೀರಿ. ವಾಹನ ಬದಲಾವಣೆಯ ಚಿಂತನೆಯನ್ನು ಮಾಡುತ್ತೀರಿ. ವೈಯಕ್ತಿಕವಾದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತೀರಿ.
PublicNext
02/01/2025 07:52 am