ಮೇಷ ರಾಶಿ: ವ್ಯಾವಹಾರಿಕ ನಿರ್ಧಾರಗಳಿಗೆ ಬೇರೆಯವರನ್ನು ಅವಲಂಭಿಸಬಹುದು. ನಿಮ್ಮ ಆದಾಯ ಮೂಲಕ್ಕೆ ಧಕ್ಕೆಯಾಗಬಹುದು. ಇಂದು ಸ್ಪರ್ಧಾತ್ಮಕವಾಗಿ ನೀವು ಸೋಲಬಹುದು. ಪ್ರೇಮಿಗಳಿಗೆ ಶುಭ ದಿನ.
ವೃಷಭ: ಸಂಬಂಧಿಕರ ಬಾಂಧವ್ಯದಲ್ಲಿ ಬಿರುಕು ಉಂಟಾಗಬಹುದು. ಒಳ್ಳೆಯ ಸುದ್ದಿಗಳಿಂದ ದೂರು ಉಳಿಯಬಹುದು. ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು. ಇಂದು ದೊಡ್ಡ ಜವಾಬ್ದಾರಿಗಳನ್ನು ಮರೆಯಬೇಡಿ.
ಮಿಥುನ: ಇಂದು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ಮಾಡಿ. ವ್ಯವಹಾರಿಕವಾಗಿ ತುಂಬಾ ಅಭಿವೃದ್ಧಿಯ ಸೂಚನೆಯಿದೆ. ಪ್ರೇಮಿಗಳಿಗೆ ಶುಭವಿರುವ ದಿನ. ಸ್ನೇಹಿತರಿಂದ ಸಹಾಯ ಸಿಗಬಹುದು. ನಿಮ್ಮ ಆಲೋಚನೆ ಸತ್ಯವಾಗಿರುವುದಿಲ್ಲ.
ಕಟಕ: ಅದೃಷ್ಟದಿಂದ ಕೆಲವು ಕೆಲಸಗಳಾಗಬಹುದು. ಪ್ರಜ್ಞಾವಂತರ ಸಂಪರ್ಕ ಸಿಗಬಹುದು. ಇಂದು ನಿರುದ್ಯೋಗಿಗಳಿಗೆ ಶುಭಫಲವಿದೆ. ಆಸ್ತಿ ವಿಚಾರದಲ್ಲಿ ಫಲ ನಿರೀಕ್ಷೆ ಮಾಡುತ್ತೀರಿ ಆದರೆ ಹುಸಿಯಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.
ಸಿಂಹ: ವ್ಯವಹಾರಿಕವಾಗಿ ಅಭಿವೃದ್ಧಿ ಕಾಣುವ ದಿನ. ಬೇರೆಯವರಿಗೆ ಮಾರ್ಗದರ್ಶನ ಮಾಡಿ ಯಶಸ್ಸು ಹೊಂದುತ್ತೀರಿ. ವಿವಾಹ ವಿಚಾರಗಳು ಮಂಗಳಕರವಾಗಿರುತ್ತವೆ. ನಿಮ್ಮ ವರ್ತನೆಯಿಂದ ಜನಮನ ಗೆಲ್ಲುತ್ತೀರಿ. ಪ್ರಯಾಣದಿಂದ ಬೇಸರವಾಗಬಹುದು ಆದರೆ ಅನಿವಾರ್ಯವಾಗಿರುತ್ತದೆ.
ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ. ಇಂದು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು. ಇಂದು ಹಳೆಯ ಸಾಲಕ್ಕೆ ಮುಕ್ತಿ ಸಿಗಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು. ಧನಾತ್ಮಕವಾದ ಬದಲಾವಣೆಗೆ ಅವಕಾಶವಿದೆ.
ತುಲಾ: ವೃತ್ತಿ ಅಥವಾ ಉದ್ಯೋಗದಲ್ಲಿ ಹೊಸ ತಿರುವು ಸಿಗಬಹುದು. ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಾಣಬಹುದು. ಇಂದು ಪ್ರಚೋಧನಕಾರಿ ಹೇಳಿಕೆಗಳಿಗೆ ಸ್ಪಂದಿಸಬೇಡಿ. ಮಾನಸಿಕವಾದ ಚಂಚಲತೆ ಕಾಡಬಹುದು. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು.
ವೃಶ್ಚಿಕ: ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ. ಇಂದು ಹಿರಿಯರಿಂದ ಪ್ರಶಂಸೆ ಸಿಗಬಹುದು. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಪ್ರೇಮಿಗಳಿಗೆ ಅಶುಭ ದಿನ. ಅತಿಥಿಗಳ ಆಗಮನದಿಂದ ತೊಂದರೆ ಉಂಟಾಗಬಹುದು.
ಧನಸ್ಸು: ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ. ಅಂದುಕೊಂಡ ಕೆಲಸವಾಯಿತು ಎನ್ನುವಾಗಲೇ ಅಡ್ಡಿ ಉಂಟಾಗಬಹುದು. ಇಂದು ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗುವುದಿಲ್ಲ. ಮಾನಸಿಕವಾಗಿ ಭಯ ಕಾಡಬಹುದು. ವಿರೋಧಿಗಳು ಹೆಚ್ಚಾಗುವ ಸಾಧ್ಯತೆಯಿದೆ.
ಮಕರ: ಸಾರ್ವಜನಿಕ ಉಪಯೋಗವನ್ನು ಪಡೆಯಬಹುದು. ಯಾರನ್ನು ನಿರ್ಲಕ್ಷ್ಯ ಮಾಡಬೇಡಿ ತೊಂದರೆಯಾಗಬಹುದು. ಮನೆಯ ವಾತಾವರಣ ಶಾಂತಿಯಿಂದಿರುವಂತೆ ಗಮನಿಸಿ. ಸಣ್ಣ ವಿಚಾರಗಳು ದೊಡ್ಡದಾಗಿ ಸಮಸ್ಯೆ ಉಂಟುಮಾಡಬಹುದು.
ಕುಂಭ: ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ. ವಿವಾಹ ವಿಚಾರ ಮುಂದೂಡಿಕೆಯಾಗಬಹುದು. ಹಲವು ಚಿಂತನೆಗಳು ನಿಮಗೆ ಮಾರಕವಾಗಬಹುದು. ಯಾರ ಸಹಾಯ ಅಥವಾ ಸಹಕಾರ ನಿರೀಕ್ಷಿಸಬೇಡಿ. ಮನೆಯಲ್ಲಿಯ ವಾತಾವರಣ ಬೇಸರ ತರಬಹುದು.
ಮೀನ: ಪ್ರೇಮಿಗಳಿಗೆ ಶುಭವಿರುವ ದಿನ. ವ್ಯವಹಾರಿಕವಾಗಿ ಮನಸ್ತಾಪದ ಸಾಧ್ಯತೆಯಿದೆ. ಹಿಡಿದಿಟ್ಟಿರುವ ಸಿಟ್ಟು ಯಾವಾಗ ಬೇಕಾದರು ಸ್ಫೋಟವಾಗಬಹುದು. ಕೆಲಸದಲ್ಲಿ ಅಸಮಾಧಾನ, ಬೇಸರವಾಗಬಹುದು.
PublicNext
03/01/2025 10:34 am