ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಸೋಮವಾರ, 06 ಜನವರಿ 2025

ಮೇಷ ರಾಶಿ

ಇಂದು ಅತಿಯಾದ ಖರ್ಚು ನಿಮ್ಮನ್ನು ಬಾಧಿಸಬಹುದು. ಹೂಡಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ವೃತ್ತಿ ವ್ಯವಹಾರದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಲು ಕಾರ್ಯಪ್ರವೃತ್ತರಾಗಿ.

ವೃಷಭ ರಾಶಿ

ಇಂದು ಹೊಸ ಹೊಸ ಹಣಕಾಸಿನ ಅವಕಾಶಗಳನ್ನು ಪಡೆಯಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯ ಅವಕಾಶಗಳನ್ನು ಪಡೆಯಬಹುದು. ಸ್ಥಿರ ಲಾಭವನ್ನು ಪಡೆಯುವಿರಿ. ನಿಮ್ಮ ಬಹುಮುಖ ಪ್ರತಿಭೆಯನ್ನು ಬೆಳೆಸಲು ಸೂಕ್ತ ವೇದಿಕೆಯನ್ನು ಕಂಡು ಕೊಳ್ಳುವಿರಿ.

ಮಿಥುನ ರಾಶಿ

ಹಿರಿಯರ ಆಶೀರ್ವಾದ ಪಡೆದು ಮುಂದುವರೆಯುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ವೃತ್ತಿ ಬದುಕಿನಲ್ಲಿ ಸಹಕಾರ ಮನೋಭಾವವು ನಿಮ್ಮನ್ನು ಉನ್ನತ ಮಟ್ಟಕ್ಕೆ ಏರಿಸಲಿದೆ. ಹಣಕಾಸಿನ ವಿಚಾರಗಳಲ್ಲಿ ಶುಭ ಸುದ್ದಿಯನ್ನು ಪಡೆಯುವಿರಿ.

ಕರ್ಕಾಟಕ ರಾಶಿ

ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಹಿಡಿದ ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ. ಆಧ್ಯಾತ್ಮಿಕ ಬೆಳವಣಿಗೆಗೆ ಹೆಚ್ಚಾಗುತ್ತದೆ. ವೈಯಕ್ತಿಕ ಸಂಬಂಧಗಳು ಸುಧಾರಿಸಲಿವೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ.

ಸಿಂಹ ರಾಶಿ

ಇದು ನೀವು ಜಾಗರೂಕತೆಯಿಂದ ಮುನ್ನಡೆಯಬೇಕಾಗಿರುವ ಸಮಯವಾಗಿದೆ. ವಿವೇಕಯುತವಾಗಿ ಉತ್ತಮ ನಡವಳಿಕೆಯನ್ನು ಕಾಪಾಗಿಕೊಳ್ಳಿ. ಪ್ರೀತಿಪಾತ್ರರೊಡನೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ. ವ್ಯಾಪಾರ-ವಹಿವಾಟಿನಲ್ಲಿ ತಾಳ್ಮೆಯಿಂದ ಇರಿ.

ಕನ್ಯಾ ರಾಶಿ

ಇಂದು ನಿಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಳ್ಳಬೇಕಾಗಬಹುದು. ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಿಮ್ಮ ಯೋಜನೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ಬಂಪರ್ ಆದಾಯ ಗಳಿಸಬಹುದು.

ತುಲಾ ರಾಶಿ

ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ವೃತ್ತಿಪರ ಪರಿಸ್ಥಿತಿಗಳು ಮಿಶ್ರ ಫಲಗಳನ್ನು ನೀಡಬಹುದು. ವೈಯಕ್ತಿಕ ಸಾಧನೆಗಳತ್ತ ಗಮನಹರಿಸಿ ಮುಂದುವರೆಯುವುದು ಶುಭ. ಸೇವಾ ವಲಯದಲ್ಲಿರುವವರಿಗೆ ಬಡ್ತಿ ಸಂಭವವಿದೆ.

ವೃಶ್ಚಿಕ ರಾಶಿ

ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಉತ್ಸಾಹಭರಿತ ಜೀವನವನ್ನು ಆನಂದಿಸುವಿರಿ. ಕುಟುಂಬದೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವೈಯಕ್ತಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಸಮಯ ನಿರ್ವಹಣೆಗೆ ಗಮನ ನೀಡಿ.

ಧನು ರಾಶಿ

ಇತರರ ಭಾವನೆಗಳನ್ನೂ ನಿರ್ಲಕ್ಷಿಸಬೇಡಿ. ಭಾವನಾತ್ಮಕವಾಗಿ ಪ್ರೀತಿಪಾತ್ರರೊಂದಿಗೆ ಅಜಾಗರೂಕತೆಯಿಂದ ವರ್ತಿಸಬೇಡಿ. ಇದು ನಿಮ್ಮ ಸಂಬಂಧದಲ್ಲಿ ಬಿರುಕುಂಟುಮಾಡಬಹುದು. ವೃತ್ತಿಪರ ಕ್ಷೇತ್ರದಲ್ಲಿ ಪ್ರಮುಖ ಕಾರ್ಯಗಳು ವೇಗವನ್ನು ಪಡೆಯಲಿವೆ.

ಮಕರ ರಾಶಿ

ವಿವಿಧ ವಿಷಯಗಳಲ್ಲಿ ಉಪಕ್ರಮವನ್ನು ತೆಗೆದುಕೊಳ್ಳುವುದು ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಧೈರ್ಯದಿಂದ ಮಾಡುವ ಕೆಲಸಗಳಲ್ಲಿ ಉತ್ತಮ ಸಾಧನೆ ಗೈಯುವಿರಿ. ಕೆಲಸದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದರಿಂದ ಶುಭ.

ಕುಂಭ ರಾಶಿ

ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವಿರಿ. ಕೌಟುಂಬಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಮಾಡಿದ ಪ್ರಯತ್ನಗಳಿಗೆ ಸೂಕ್ತ ಪ್ರತಿಫಲವನ್ನು ಕಾಣುವಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ.

ಮೀನ ರಾಶಿ

ನಿಮ್ಮ ಬಹುಮುಖ ಪ್ರತಿಭೆಗೆ ಮೆಚ್ಚುಗೆ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ಸೃಷ್ಟಿಯಾಗಲಿವೆ. ಸೃಜನಾತ್ಮಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಶುಭವಾಗಲಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವುದರಿಂದ ಮನಸ್ಸಿಗೆ ಸಂತೋಷ.

Edited By : Nagaraj Tulugeri
PublicNext

PublicNext

06/01/2025 08:53 am

Cinque Terre

39.8 K

Cinque Terre

0