ಮೇಷ ರಾಶಿ
ಇಂದು ನಿಮ್ಮ ದಿನವು ಉತ್ಸಾಹದಿಂದ ತುಂಬಿರುತ್ತದೆ. ಪ್ರಮುಖ ಯೋಜನೆಗಳಲ್ಲಿ ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವುವು. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ.
ವೃಷಭ ರಾಶಿ
ಇಂದು ಇಡೀ ದಿನ ನೀವು ಸಂತಸದಿಂದ ಕಳೆಯುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರೂ ದಿಢೀರ್ ಧನಲಾಭವು ನಿಮ್ಮನ್ನು ಉತ್ಸಾಹದ ಚಿಲುಮೆಯಂತೆ ಇರಿಸಲಿದೆ. ದಾಂಪತ್ಯ ಜೀವನವು ಆನಂದದಾಯಕವಾಗಿರಲಿದೆ.
ಮಿಥುನ ರಾಶಿ
ಇಂದು ನಿಮಗೆ ಶುಭ ಸುದ್ದಿಯೊಂದು ಕೇಳಿಬರಲಿದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಂಭವವಿದೆ. ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಯೋಜಿಸಬಹುದು.
ಕರ್ಕಾಟಕ ರಾಶಿ
ಇಂದು ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ಮಾಡುವ ಕೆಲಸಗಳಲ್ಲಿ ಶಿವನ ಬೆಂಬಲವಿದ್ದು ಸೋಲೆಂಬುದೇ ಇಕೃವುದಿಲ್ಲ. ಉದ್ಯೋಗಸ್ಥರಿಗೆ ಕೆಲಸದ ಹೊರೆ ಹೆಚ್ಚಾಗಬಹುದು. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ.
ಸಿಂಹ ರಾಶಿ
ಬಹಳ ದಿನಗಳ ಬಳಿಕ ನೀವಿಂದು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಕುಟುಂಬದಲ್ಲಿ ಆಧ್ಯಾತ್ಮಿಕ ವಾತಾವರಣ ಇರುತ್ತದೆ. ಬೇರೆಯವರೊಂದಿಗೆ ನಿಮ್ಮ ನಡವಳಿಕೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ.
ಕನ್ಯಾ ರಾಶಿ
ಸಮಾಜದಲ್ಲಿ ಇಂದು ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಒಟ್ಟಿಗೆ ಕುಳಿತು ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ನಿಮ್ಮ ಆಲೋಚನೆಗಳಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ.
ತುಲಾ ರಾಶಿ
ಇಂದು ಹಳೆಯ ಸ್ನೇಹಿತರೊಬ್ಬರ ಭೇಟಿ ನಿಮ್ಮ ಮನಸ್ಸಿಗೆ ಮುದ ನೀಡಲಿದೆ. ಕೌಟುಂಬಿಕ ವಾತಾವರಣವು ಸಂತೋಷದಾಯಕವಾಗಿ ಇರಲಿದೆ. ವ್ಯವಹಾರದ ದೃಷ್ಟಿಯಿಂದ ಇಂದು ಅನಿರೀಕ್ಷಿತ ಆದಾಯ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ನಿಮ್ಮ ಅಧ್ಯಯನದತ್ತ ಹೆಚ್ಚಿನ ಗಮನವಹಿಸಿ.
ವೃಶ್ಚಿಕ ರಾಶಿ
ಇಂದು ದಿನವಿಡೀ ಭರವಸೆಯಿಂದ ತುಂಬಿರಲಿದೆ. ಮಕ್ಕಳ ಅಧ್ಯಯನದಲ್ಲಿ ಯಶಸ್ಸನ್ನು ಕಂಡು ಮನಸ್ಸು ಸಂತಸಗೊಳ್ಳಲಿದೆ. ಆಶಾದಾಯಕವಾಗಿ ಭವಿಷ್ಯಕ್ಕಾಗಿ ಹಣವನ್ನು ಕೂಡಿದಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮಕರ ರಾಶಿ
ಇಂದು ನಿಮಗೆ ಅನುಕೂಲಕರವಾದ ದಿನ. ಕುಟುಂಬದೊಂದಿಗೆ ಎಲ್ಲಾದರೂ ಪ್ರಯಾಣಕ್ಕಾಗಿ ಯೋಜಿಸಬಹುದು. ನಿಮ್ಮ ಮನೆಗೆ ಇಂದು ಪುಟ್ಟ ಅತಿಥಿಗಳ ಆಗಮನವಾಗಲಿದ್ದು ಮನೆಯಲ್ಲಿ ಸಂಭ್ರಮ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.
ಕುಂಭ ರಾಶಿ
ಇಂದು ಮಕ್ಕಳೊಂದಿಗೆ ಹೊರಹೋಗಲು ಯೋಜಿಸಬಹುದು. ಮನೆಗೆ ಅತಿಥಿಗಳ ಆಗಮನದಿಂದ ಸಂತೋಷದ ವಾತಾವರಣ ತುಂಬಲಿದೆ. ವ್ಯಾಪಾರಸ್ಥರಿಗೆ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.
ಮೀನ ರಾಶಿ
ಇಂದು ನೀವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸುವ ಪ್ರಯತ್ನಕ್ಕೆ ಮನೆಯವರಿಗೆ ಬೆಂಬಲ ದೊರೆಯಲಿದೆ. ಉದ್ಯೋಗಸ್ಥರಿಗೆ ಇಂದು ಅನುಕೂಲಕರವಾದ ದಿನ.
PublicNext
07/01/2025 08:32 am