ಮೇಷ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆದಷ್ಟು ಮೌನಕ್ಕೆ ಶರಣು ಹೋಗಿ. ಅನಗತ್ಯ ಕೆಲಸಗಳಿಂದ ನಿಮಗೆ ಮಾರಕವಾಗಬಹುದು. ದೈನಂದಿನ ಕಾರ್ಯಗಳಿಗೆ ತೊಂದರೆಯಾಗದಂತೆ ನೀವು ಸ್ನೇಹಿತರ ಸಹಾಯ ಪಡೆದುಕೊಳ್ಳಿ.
ವೃಷಭ: ನಿಮ್ಮ ದೇಹದಲ್ಲಿ ಕಾಂತಿ ಹೆಚ್ಚಾಗಬಹುದು. ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿ. ನಿಮ್ಮ ಮುಗ್ಧ ಮನಸ್ಸಿನಿಂದ ಬೇರೆಯವರಿಗೆ ಸಹಾಯವಾಗಬಹುದು. ದಿನವನ್ನು, ವಾತಾವರಣವನ್ನು ಉತ್ತಮಗೊಳಿಸಿ. ಕುಟುಂಬದವರ ಹೊಗಳಿಕೆ ನಿಮಗೆ ಸ್ಫೂರ್ತಿ.
ಮಿಥುನ: ದಿನದ ಆರಂಭ ಸಂತೋಷವಾಗಿರುತ್ತದೆ. ಸಂಜೆಗೆ ಹೆಚ್ಚು ಖರ್ಚು, ಆತಂಕ ಕಾಡಬಹುದು. ನಿಮ್ಮ ಸ್ನೇಹಿತರ ವೈಯಕ್ತಿಕ ಸಮಸ್ಯೆ ನಿಮಗೂ ತೊಂದರೆ ಮಾಡಬಹುದು. ಮನೆಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಜಗಳವಾಗಬಹುದು.
ಕಟಕ: ನಿಮ್ಮ ಸ್ವಭಾವದಿಂದ ಸ್ನೇಹಿತರಿಗೆ ಬೇಸರ ಉಂಟಾಗಬಹುದು. ಹೆಚ್ಚು ಹಣ ಹೂಡಿಕೆ ಬೇಡ. ದುರಾಸೆ ಇಲ್ಲದ ಕೆಲಸಗಳಿಂದ ಸಂತೋಷ. ಹಿಂದೆ ಹೂಡಿಕೆ ಮಾಡಿದ್ದ ಆಸ್ತಿಯ ವಿಚಾರದಲ್ಲಿ ಗೊಂದಲ. ಹೆಂಡತಿಯ ಅಥವಾ ಗಂಡನ ಕಡೆಯವರಿಂದ ಕಲಹ ಉಂಟಾಗಬಹುದು.
ಸಿಂಹ: ಹೊಸ ಗುರಿಗಳಿಗೆ ಅದ್ಭುತವಾದ ದಿನ. ಸಂದರ್ಶನಗಳಲ್ಲಿ ಯಶಸ್ಸಿದೆ. ಇಂದು ಪ್ರೇಮಿಗಳಿಗೆ ಶುಭದಿನ. ಹಳೆಯ ಸಂಬಂಧಗಳು ಪುನಃ ಒಂದಾಗಬಹುದು. ಇಂದು ಜವಾಬ್ದಾರಿಯಿಂದ ವರ್ತಿಸದಿದ್ದರೆ ನಷ್ಟವಾಗಬಹುದು.
ಕನ್ಯಾ: ಆಸ್ತಿ ವಿಚಾರಕ್ಕೆ ವಿವಾದ, ಸಮಸ್ಯೆ ಉಂಟಾಗಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಜನಾಕ್ರೋಶ. ಆಧುನಿಕ ಪ್ರಪಂಚಕ್ಕೆ ಅವಲಂಬಿತರಾಗುವವರಿಗೆ ಸಮಸ್ಯೆ. ಶಾರೀರಿಕ ಸಮಸ್ಯೆ ಉಂಟಾಗಬಹುದು. ಮಹಿಳೆಯರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ತುಲಾ: ಧನಾತ್ಮಕ ಶಕ್ತಿ ನಿಮ್ಮದಾಗುವ ದಿನ. ಕಾರ್ಯಕ್ಷೇತ್ರದಲ್ಲಿ ಅತೀವ ಶ್ರಮ ಬೇಕಾಗಬಹುದು. ಪ್ರೀತಿ, ಪ್ರೇಮಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ಆರ್ಥಿಕ ಅಭಿವೃದ್ಧಿಯಿಂದ ಸಮಾಧಾನ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ವೃಶ್ಚಿಕ: ತುಂಬಾ ತಾಳ್ಮೆ ಇರಬೇಕಾದ ದಿನ. ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಇರುತ್ತದೆ. ಹಣದ ವಿಚಾರಲ್ಲಿ ಕಿರಿಕಿರಿಯಾಗಬಹುದು. ನಕಾರಾತ್ಮಕ ಅಥವಾ ಅಶುಭ ಸುದ್ದಿಯಿಂದ ಬೇಸರವಾಗಬಹುದು. ಇಂದು ಪ್ರಯತ್ನ ಪೂರ್ವಕ ಕೆಲಸಗಳಾಗುತ್ತವೆ.
ಧನಸ್ಸು: ಆತ್ಮವಿಶ್ವಾಸ ಹೆಚ್ಚಾಗಬಹುದಾದ ದಿನ. ವ್ಯವಹಾರಿಕವಾಗಿ ಪ್ರಗತಿ ಇದೆ. ಮಾರ್ಕೆಟಿಂಗ್ ಕೆಲಸದಲ್ಲಿ ಶುಭ ಲಾಭವಿದೆ. ಮನೆಗೆ ಅತಿಥಿಗಳ ಆಗಮನದಿಂದ ಸಂತೋಷವಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಹೆಚ್ಚುವ ಆದಾಯ.
ಮಕರ: ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವಿದೇಶದಲ್ಲಿರುವವರಿಗೆ ಶುಭ ಸುದ್ದಿ ಆತಂಕವು ಇರುತ್ತದೆ. ಹೊಸ ಆಸ್ತಿ ಖರೀದಿಸಬಹುದು
ಬೆಲೆ ಬಾಳುವ ವಸ್ತು ಖರೀದಿಯಲ್ಲಿ ಮೋಸ ಹೋಗಬಹುದು. ಅನುಭವಿಗಳ ಮಾತು ವ್ಯರ್ಥವಾಗಬಹುದು
ಕುಂಭ: ಮೇಲಾಧಿಕಾರಿಗಳಿಂದ ಸಹಾಯ ಅನುಕೂಲ ಸಿಗಬಹುದು. ವಿದೇಶ ಪ್ರಯಾಣಕ್ಕೆ ಪ್ರಯತ್ನಿಸಬಹುದು. ನಿರೀಕ್ಷಿತ ಕೆಲಸಗಳಾಗುವ ಸಾಧ್ಯತೆ ಇದೆ. ಅಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ. ಬೇರೆಯವರನ್ನ ಪೂರ್ಣವಾಗಿ ಅವಲಂಬಿಸಬೇಡಿ.
ಮೀನ: ಪ್ಲಾನ್ ಮಾಡಿ ಎಲ್ಲಾ ಕೆಲಸಕ್ಕೆ ಮುಂದಾಗಿ. ಮನಸ್ಸಿನಲ್ಲಿ ಋಣಾತ್ಮಕ ಯೋಚನೆ ಬೇಡ. ಉದ್ಯೋಗ ಸ್ಥಳದಲ್ಲಿ ವೈಮನಸ್ಸು ಉಂಟಾಗಬಹುದು. ಸಣ್ಣ ವಿಚಾರಗಳಿಗೆ ಕೋಪ ಬೇಡ. ಕಾಲು ನೋವಿನ ಸಮಸ್ಯೆ ಕಾಡಬಹುದು.
PublicNext
01/01/2025 07:36 am