ಕಾರವಾರ: ಜಿಲ್ಲೆಯ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆನಡೆಸುವಾಗ ತಮಿಳುನಾಡು ಮೂಲದ ಮೀನುಗಾರನೋರ್ವರಿಗೆ ಬರೋಬ್ಬರಿ 23.720 ಕೆಜಿ ತೂಕದ ಕಿಂಗ್ ಫಿಶ್ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ.
ಮೀನುಗಾರ ಡಿಜೋ ಅವರ ಬಲೆಗೆ ಈ ಬೃಹತ್ ಗಾತ್ರದ ಮೀನು ಬಿದ್ದಿದೆ. ಇಲ್ಲಿನ ಬೈತಖೋಲ್ ಬಂದರಿನಲ್ಲಿ ಮೀನನ್ನು ತೂಕ ಮಾಡಿದ್ದು ಬರೋಬ್ಬರಿ 23.720 ಕೆ.ಜಿ ತೂಗಿದೆ. ಕಳೆದ ನಾಲ್ಕು ವರ್ಷದ ಹಿಂದೆ 17 ಕೆಜಿ ತೂಕದ ಕಿಂಗ್ ಫಿಶ್ ಬಲೆಗೆ ಬಿದ್ದಿತ್ತು. ಬಳಿಕ ಸಿಕ್ಕ ಈ ಮೀನು ಸಧ್ಯ ಸ್ಥಳೀಯರು ನೋಡಿದ ಅತಿ ದೊಡ್ಡ ಕಿಂಗ್ ಫಿಶ್ ಎಂದು ಮೀನುಗಾರ ಓರ್ವರು ಮಾಹಿತಿ ನೀಡಿದ್ದಾರೆ.
Kshetra Samachara
07/01/2025 05:43 pm