ಭಟ್ಕಳ: ತಾಲೂಕಿನ ಶಂಸುದ್ದಿನ್ ಸರ್ಕಲ್ ಸಮೀಪ ಪಾದಚಾರಿ ವೃದ್ಧೆಯೋರ್ವಳ ಮೇಲೆ ಯುಟರ್ನ್ ತೆಗೆದುಕೊಳ್ಳುತ್ತಿದ್ದ ಖಾಸಗಿ ಬಸ್ ಹರಿದು ವೃದ್ಧೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಲಕ್ಷ್ಮೀ ಜಟ್ಟ ನಾಯ್ಕ (70) ಶಿರಾಲಿ ಚಿತ್ರಾಪುರ ನಿವಾಸಿ ಎಂದು ತಿಳಿದು ಬಂದಿದೆ.
ಭಟ್ಕಳದಿಂದ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ ಹೊನ್ನಾವರ ಕಡೆಯಿಂದ ಬಂದು ಭಟ್ಕಳ ಶಂಸುದ್ದಿನ್ ಸರ್ಕಲ್‌ನಲ್ಲಿ ಯೂಟರ್ನ್ ತೆಗದುಕೊಳ್ಳುತ್ತಿದ್ದ ವೇಳೆ ವೃದ್ಧೆಯ ಮೇಲೆ ಹರಿದ ಪರಿಣಾಮ ವೃದ್ಧೆ ಒಂದು ಕಾಲು ಸಂಪೂರ್ಣ ಜಜ್ಜಿ ಹೋಗಿದೆ.
ತಕ್ಷಣ ವೃದ್ಧೆಯನ್ನು ಭಟ್ಕಳ ಸರ್ಕಾರಿ ಸಾಗಿಸಿದ್ದು ಚಿಕಿತ್ಸೆ ಫಲಿಸದೇ ವೃದ್ಧೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಭಟ್ಕಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/01/2025 10:27 pm