ಸಿದ್ದಾಪುರ :- ಸಿದ್ದಾಪುರ ತಾಲೂಕಿನ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಿದೆ ಅಂದರೆ ಇಲ್ಲಿನ ಶಿಕ್ಷಕರ ಕ್ರೀಯಾಶೀಲತೆಯಿಂದ ಇದು ಸಾಧ್ಯವಾಗಿದೆ.ಇವರಲ್ಲಿ ಪ್ರತಿಶತ ಎಪ್ಪತ್ತರಷ್ಟು ಮಹಿಳಾ ಶಿಕ್ಷಕರಿದ್ದು, ಇವರು ಮಾತೃ ಹೃದಯದಿಂದ ಮಕ್ಕಳಿಗೆ ಬೋಧಿಸುತ್ತಿದ್ದು ಶೈಕ್ಷಣಿಕ ಸಾಧನೆಗೆ ಮಹಿಳಾ ಶಿಕ್ಷಕರ ಕೊಡುಗೆ ಸಾಕಷ್ಟಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಪಿ. ಬಸವರಾಜ ಹೇಳಿದರು.
ಇವರು ಶಂಕರ ಮಠದಲ್ಲಿ ಸಿದ್ದಾಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.
ತಾಲೂಕಿನ ಹದಿನೆಂಟು ಕ್ಲಸ್ಟರ್ ಗಳ ಹದಿನೆಂಟು ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಘ ಹಾಗೂ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಅವಕಾಶ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆಯರವನ್ನು ಇಲಾಖೆ ಹಾಗೂ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಂ.ಕೆ.ಮೊಗೇರ,ಚೈತನ್ಯಕುಮಾರ ಕೆ.ಎಂ, ಬಾಲಚಂದ್ರ ಪಟಗಾರ, ಎಂ.ವಿ.ನಾಯ್ಕ , ನಾಗರಾಜ ಮಡಿವಾಳ, ನಮೃತ ವಿ, ಬಸವರಾಜ ಕಡಪಟ್ಟಿ, ಮೇಧಾ ಹೆಗಡೆ, ಸುಜಾತಾ ಎಚ್, ಸಹನಾ ಬಿ.ಎಲ್, ವಂದನಾ ಕಲಭಾಗ,ಯಶೋಧ ಭಟ್, ಅನ್ನಪೂರ್ಣ ಅಡಕೆಪಾಲ್ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಸತೀಶ ಹೆಗಡೆ ಸ್ವಾಗತಿಸಿದರು, ಕಾರ್ಯದರ್ಶಿ ಗುರುರಾಜ ನಾಯ್ಕ ನಿರೂಪಿಸಿದರು, ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ ಬಿ. ವಂದಿಸಿದರು.
Kshetra Samachara
03/01/2025 10:27 pm