ಮಂಡ್ಯ: ನಮ್ ಬ್ರದರ್ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಸರ್ಕಾರ ಬಂದಾಗಿನಿಂದಲೂ ತುಂಬಾ ನೋವು ಪಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಯಾರಾದ್ರೂ ಸಮಾಧಾನ ಹೇಳಿ ಅಂತ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಮಂಡ್ಯದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸುದೀರ್ಘವಾಗಿ ರಾಜಕೀಯದಲ್ಲಿದ್ದವರು ಯಾವುದೇ ಸರ್ಕಾರ ಬೀಳುತ್ತೆ, ತೆಗೀತಿವಿ ಅಂತ ಹೇಳೋದು ಡೆಮಾಕ್ರಸಿನಲ್ಲಿ ಒಳ್ಳೆಯದಲ್ಲ ಅಂತ ಹೇಳಿದ ಚಲುವರಾಯಸ್ವಾಮಿ, ಸರ್ಕಾರ ರಚನೆಯಾಗಿ ಹದಿನೆಂಟು ತಿಂಗಳು ಆಗ್ತಾ ಬಂತು. ಒಂದನೇ ತಿಂಗಳಿಂದಲೇ ತೆಗೆಯೋ ಮಾತು ಕೇಳಿ ಬರ್ತಾ ಇದೆ, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ ಅಂತ ಹೇಳಿದ್ರು. ಅವರ ಸಂಕಟ ಏನು ಅಂತ ನಮಗೆ ಗೊತ್ತಾಗುತ್ತಿಲ್ಲ. ಅದಕ್ಕೆ ನಮ್ಮ ಬಳಿ ಔಷಧಿ ಕೂಡಾ ಇಲ್ಲ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ ನಡೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ರು.
PublicNext
09/01/2025 07:30 am