ಮಂಡ್ಯ: ಅಂಬೇಡ್ಕರ್ ಜಪ ಮಾಡೋದು ಫ್ಯಾಷನ್ ಆಗಿದೆ ಅಂತ ಗೃಹ ಸಚಿವ ಅಮಿತ್ ಶಾ ಸಂಸತ್ ಭವನದಲ್ಲಿ ನೀಡಿದ ಹೇಳಿಕೆ ಖಂಡಿಸಿ ಇಂದು ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು ವಿನೂತನ ಪ್ರತಿಭಟನೆ ಮಾಡಿದ್ರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಸ್ಮರಣೆ ಮಾಡುವ ಮೂಲಕ ಪ್ರತಿಭಟನೆ ಪ್ರಾರಂಭಿಸಿದ ಪ್ರತಿಭಟನಾಕಾರರು ಪ್ರತಿಭಟನೆಗೆ ಬಂದಿದ್ದವರಿಗೆ ಸಂವಿಧಾನ ಪುಸ್ತಕ ಹಾಗೂ ಬಾಬಾಸಾಹೇಬರ ಭಾವ ಚಿತ್ರ ನೀಡುವ ಮೂಲಕ ಪ್ರತಿಭಟಿಸಿದ್ರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಹಾಗೂ ಪಶ್ಚಿಮ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ರು
PublicNext
30/12/2024 05:09 pm