ಮಂಡ್ಯ: ರಾಜ್ಯದಲ್ಲಿ ಅಂಬೇಡ್ಕರ್ ಸಿದ್ದಾತವಿಲ್ಲ. ಇಲ್ಲೇನಿದ್ರು ಸಿದ್ದರಾಮಯ್ಯ ಸಿದ್ದಾಂತ ಅಂತ ಹೇಳಿಕೆ ನೀಡಿದ್ದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ವಿರುದ್ಧ ಮಂಡ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಂದು ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ನೈಜ ಪರಿಸಿಷ್ಠ ಜಾತಿ ಸಮುದಾಯಗಳ ಸಾಂವಿಧಾನಿಕ ಹಕ್ಕು ಅವಕಾಶಗಳ ಸಂರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಕೃಷ್ಣ, ಸಿಎಂ ಪರಿಶಿಷ್ಠ ಜಾತಿ ಕೋಟಾದಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ನರೇಂದ್ರ ಸ್ವಾಮಿ ಈ ರೀತಿ ಮಾತನಾಡಿರುವುದು ವಿಪರ್ಯಾಸ. ಕೂಡಲೇ ನರೇಂದ್ರ ಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಬೇಕಾದ್ರೆ ನರೇಂದ್ರಸ್ವಾಮಿ ಸಿದ್ದರಾಮಯ್ಯನ ದೇವಸ್ಥಾನ ಕಟ್ಟಿಕೊಂಡು ಪೂಜಾರಿಯಾಗಿ ಸಿದ್ದರಾಮಯ್ಯನ ಸಿದ್ಧಾಂತ ಪಾಲನೆ ಮಾಡಲಿ ಅಂತ ಆಗ್ರಹಿಸಿದ್ದಾರೆ.
Kshetra Samachara
28/12/2024 07:14 pm