ಮಂಡ್ಯ : ಸರಿಯಾದ ವೇತನ, ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸುವುದನ್ನ ಕೈಬಿಡುವಂತೆ, ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತರಿಗೆ ವಿಶ್ರಾಂತಿ ಕೊಠಡಿ ಒದಗಿಸಿ ಕೊಡುವಂತೆ ಗೌರವ ಮತ್ತು ಪ್ರೋತ್ಸಾಹ ಧನನೀಡುವಂತೆ ಆಗ್ರಹಿಸಿ ಆಸಾ ಕಾರ್ಯಕರ್ತರು ಇಂದು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂಜಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣೆಗೆಯಲ್ಲಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
PublicNext
30/12/2024 05:13 pm