ಮಂಡ್ಯ: ಅದು ಮೈಸೂರು ಮಲ್ಲಿಗೆಯ ಪ್ರಣಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಹುಟ್ಟಿದ ತಾಲ್ಲೂಕು, ಮೈಸೂರು ಮಲ್ಲಿಗೆ ಕಂಪನ್ನ ಇಡೀ ದೇಶಕ್ಕೆ ಪಸರಿಸಿದ ತಾಲ್ಲೂಕು. ಅಷ್ಟೇ ಏಕೆ ಅ.ರಾ.ಮಿತ್ರ, ಎ.ಎನ್.ಮೂರ್ತಿರಾಯ ಹಾಗೂ ರಂಗಕರ್ಮಿ ಶಶಿಧರ್ ಭಾರಿಘಾಟ್ ಅವರ ಸ್ವಂತ ಊರು. ಇಂತಹ ಕವಿಗಳು ಹುಟ್ಟಿದ ಊರನ್ನ ನೋಡೋಣ ಅಂತ ಹೊರ ಊರಿಂದ ಯಾರಾದ್ರು ಇಲ್ಲಿಗೆ ಬಂದ್ರೆ ಬಸ್ ಸ್ಡ್ಯಾಂಡ್ ನಿಂದಲೇ ಹಿಂದಿರುಗಿ ಹೋಗೋದು ಖಂಡಿತಾ. ಅಷ್ಟಕ್ಕೂ ಆ ಊರು ಯಾವುದು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಒಂದು ವರ್ಷವೇ ಕಳೆದರೂ ಉದ್ಘಾಟನೆಗೊಳ್ಳದೇ ರಾಜಕಾರಣಿಗಳ ಸ್ವಪ್ರತಿಷ್ಠೆಯಿಂದ ಹಾಳು ಕೊಂಪೆಯಂತಾಗಿದೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ.
ಸಾರ್ವಜನಿಕರಿಗೆ ಸದ್ಬಳಕೆ ಆಗಬೇಕಿದ್ದ ಸರ್ಕಾರಿ ಬಸ್ ನಿಲ್ದಾಣ ಜನಪ್ರತಿನಿಧಿಗಳ ಈರ್ಷೆಗೆ ಉದ್ಘಾಟನೆ ಭಾಗ್ಯ ಕಾಣದೇ ಗಿಡ ಗಂಟೆ ಬೆಳೆದುಕೊಂಡಿದೆ. ಜೊತೆಗೆ ಈ ಬಸ್ ನಿಲ್ದಾಣ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗೆ ನೆಚ್ಚಿನ ತಾಣವಾಗಿ ಕಸದ ರಾಶಿಯಿಂದ ತುಂಬಿ ಹೋಗಿದೆ.
ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರವಾಗಿರೋದ್ರಿಂದ ಕೇಂದ್ರಸ್ಥಾನದಿಂದ ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕವಿದೆ. ಬಸ್ ನಿಲ್ದಾಣ ಆಗುವವರೆಗೂ ಪ್ರಯಾಣಿಕರಿಗೆ ಕೂರಲು ನಿಲ್ಲಲೂ ಜಾಗವಿಲ್ಲದೇ ಒಂದು ರೀತಿ ಪರದಾಟ ಆಗಿತ್ತು.
ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆಯಾಗದೇ ಮತ್ತೊಂದು ರೀತಿ ಪರದಾಟ ಶುರುವಾಗಿದೆ. ಕಾರಣವೆಂದರೆ ಇಲ್ಲಿನ ಶಾಸಕರು ಗೆದ್ದಿರೋದು ಜೆಡಿಎಸ್ ನಿಂದ. ಈಗ ರಾಜ್ಯದಲ್ಲಿ ಇರೋದು ಕಾಂಗ್ರೆಸ್ ಸರ್ಕಾರ. ಉಸ್ತುವಾರಿ ಸಚಿವರು ಚಲುವರಾಯಸ್ವಾಮಿ ಈ ಬಸ್ ಸ್ಟ್ಯಾಂಡ್ ಕಟ್ಟಲು ಪ್ರಾರಂಭಿಸಿದಾಗ ಹಣ ಬಿಡುಗಡೆ ಮಾಡಿದ್ದು, ಬಿಜೆಪಿ ಸರ್ಕಾರದ ಅಂದಿನ ಉಸ್ತುವಾರಿ ಸಚಿವರಾಗಿದ್ದ ಮಾಜಿ ಸಚಿವ ನಾರಾಯಣಗೌಡ ಎಲ್ಲರಿಗೂ ತಾವೇ ಕ್ರೆಡಿಟ್ ತೆಗೆದುಕೊಳ್ಳುವ ಕಾತುರ. ಹಾಗಾಗಿ ಉದ್ಘಾಟನೆ ಮರೀಚಿಕೆಯಾಗಿದೆ. ಈ ಅವ್ಯವಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರವೇ ಬಸ್ ನಿಲ್ದಾಣ ಉದ್ಘಾಟಿಸಿ ಸದ್ಬಳಕೆ ಆಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬೈಟ್: ವಿದ್ಯಾರ್ಥಿನಿಯರು, ಅಕ್ಕಿಹೆಬ್ಬಾಳು
PublicNext
31/12/2024 10:45 pm