ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಂಸತ್ತಿನಲ್ಲಿ ಅಂಬೇಡ್ಕರ್‌ಗೆ ಅವಮಾನ - ಅಮಿತ್ ಶಾ ರಾಜೀನಾಮೆಗೆ ಪ್ರಗತಿಪರ ಸಂಘಟನೆ ಆಗ್ರಹ

ಮಂಡ್ಯ: ಸಂಸತ್ತಿನಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ನೀಡಿದ್ದ ಮಂಡ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಅಂಗಡಿ ಮುಂಗಟ್ಟು ಎಂದಿನಂತೆ‌ ತೆರೆದಿದ್ದವು. ಜನಜೀವನ ಸಾಮಾನ್ಯವಾಗಿತ್ತು. ಪ್ರತಿಭಾಟನಾಕಾರರು ನಗರದ ಹಲವೆಡೆ ವರ್ತಕರನ್ನು ಅಂಗಡಿ ಬಾಗಿಲು ಮುಚ್ಚುವಂತೆ ವಾಗ್ವಾದಕ್ಕಿಳಿದರು. ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟನ್ನು ಮುಂದುವರಿಸಿದರು. ಇನ್ನುಳಿದಂತೆ ಜನಜೀವನ, ಸಾರಿಗೆ ವ್ಯವಸ್ಥೆ, ಸರ್ಕಾರಿ ಸೇವೆ, ಶಾಲಾ-ಕಾಲೇಜು, ಬ್ಯಾಂಕ್ ಸೇರಿದಂತೆ ಇತರ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸರ್ಕಾರಿ, ಖಾಸಗಿ ಬಸ್, ಲಾರಿ, ಆಟೋ, ಟೆಂಪೋ ಸಂಚಾರ ಎಂದಿನಂತಿದ್ದರೆ ಶಾಲಾ ಕಾಲೇಜುಗಳು, ಕೇಂದ್ರ ರಾಜ್ಯ ಸರ್ಕಾರಿ ಇಲಾಖೆ, ಬ್ಯಾಂಕ್ ಸೇರಿದಂತೆ ಇತರೆ ಸರ್ಕಾರಿ ಸೇವೆಗಳು ಸುಗಮವಾಗಿ ನಡೆದವು. ಪೆಟ್ರೋಲ್ ಬಂಕ್, ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟಾಗಲಿಲ್ಲ. ಜನ ಜೀವನ ಸಹಜ ಸ್ಥಿತಿಯಲ್ಲಿತ್ತು.

ಪ್ರತಿಭಟನಾಕಾರರ ಬಲವಂತಕ್ಕೆ ಕೆಲವು ಅಂಗಡಿಗಳು ಬಾಗಿಲು ಮುಚ್ಚದರೂ ಮತ್ತೆ ತರದವು. ಒಟ್ಟಾರೆ ವಿವಿಧ ಸಂಘಟನೆಗಳು ಬೈಕ್ ರ್‍ಯಾಲಿ ನಡೆಸಿದ್ದು ಬಿಟ್ಟರೆ ಬಂದ್ ನಂತಹ ವಾತಾವರಣ ಮಂಡ್ಯದಲ್ಲಿ‌ಇರಲಿಲ್ಲ. ಬನ್ನೂರು ರಸ್ತೆಯಲ್ಲಿ ಬೇಕ್ ಪಾಯಿಂಟ್ ಬೇಕರಿ ಎಂದಿನಂತೆ‌ ತೆರೆದಿತ್ತು. ಪ್ರತಿಭಟನಾಕಾರರು ಬಾಗಿಲು ಮುಚ್ಚಿಸಲು ಮುಂದಾದಾಗ ಪೊಲೀಸರು ತಡೆದು ಅಲ್ಲಿಂದ ಪ್ರತಿಭಟನಾಕಾರರನ್ನು ಕಳುಹಿಸಿದರು.

Edited By : Suman K
Kshetra Samachara

Kshetra Samachara

07/01/2025 04:35 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ