ಮಂಡ್ಯ: ಮನೆಯಲ್ಲಿ ತಾಯಿಗೆ ಕಿರುಕುಳ ನೀಡುತ್ತಿದ್ದ ಎಂಬ ತಾಯಿ ನೀಡಿದ ದೂರಿನ ಹಿನ್ನೆಲೆ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿ ಕುತ್ತಿಗೆಯ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾನೆ.
ಈ ಘಟನೆ ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯ ಟಿ.ಬಿ. ಬಡಾವಣೆ ನ್ಯಾಯಲಯ ಮುಂಭಾಗ ನಡೆದಿದೆ ಕಸಬಾ ಹೋಬಳಿಯ ಮಜ್ಜನ ಕೊಪ್ಪಲು ಗ್ರಾಮದ ಶಿವಲಿಂಗಯ್ಯನ ಪುತ್ರ ಪೂಜಾರಿ ಕೃಷ್ಣ ಹಲ್ಲೆ ಮಾಡಿದ ವ್ಯಕ್ತಿ.
ಈತನ ತಾಯಿ ಮರಿಯಮ್ಮ ದೂರು ನೀಡಿದ ಹಿನ್ನೆಲೆ ವಿಚಾರಣೆಗೆಂದು ಠಾಣೆಗೆ ಕರೆತರಲು ಹೋದಾಗ ಆರೋಪಿ ಕೃಷ್ಣ ಎಂಬಾತ ನಾಗಮಂಗಲ ಗ್ರಾಮಾಂತರ ಠಾಣೆ ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರುಣ್ ಪ್ರಸಾದ್, ಪಬ್ಲಿಕ್ ನೆಕ್ಸ್ಟ್ ಮಂಡ್ಯ
PublicNext
05/01/2025 02:59 pm